
ಹಿರಿಯೂರು :
ಸಾರ್ವಜನಿಕರ ಮತ್ತು ಆರ್ಯವೈಶ್ಯ ಸಮಾಜದವರ ಸೇವೆಗಳಲ್ಲಿ ನಮ್ಮ ಸಂಘದವರು ನಿಸ್ವಾರ್ಥ ಸೇವೆಗಳನ್ನು ನೀಡುತ್ತಿದ್ದೇವೆ, ಶ್ರೀರಾಮನವಮಿ ಪ್ರಯುಕ್ತ ಪಾನಕ-ಕೋಸಂಬರಿ ವಿತರಣೆ ಕಾರ್ಯ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂಬುದಾಗಿ ಶ್ರೀವಾಸವಿ ಅದೃಷ್ಟನಿಧಿ ಅಧ್ಯಕ್ಷರಾದ ಪುಲಗಂ ಬಾಲಾಜಿಯವರು ಹೇಳಿದರು.
ನಗರದ ನೆಹರು ವೃತ್ತದಲ್ಲಿ ಶ್ರೀರಾಮನವಮಿ ಪ್ರಯುಕ್ತ ಶ್ರೀವಾಸವಿ ಅದೃಷ್ಟನಿಧಿ ಬಳಗದಿಂದ ಸಾರ್ವಜನಿಕರಿಗೆ ಪಾನಕ-ಕೋಸಂಬರಿ ವಿತರಿಸಿ, ನಂತರ ಅವರು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಸತ್ಯನಾರಾಯಣ್, ಪಿ.ವಿ.ನಾಗರಾಜ್, ಪುರುಷೋತ್ತಮ್, ವೆಂಕಟಾಚಲ, ಅದೃಷ್ಟ ನಿಧಿ ಬಳಗದ ಹೆಚ್.ವಿ.ನಾಗೇಶ್, ರಂಗನಾಥ್, ಪ್ರಭಾಕರ್, ಬೆಲ್ಲಂಮಂಜಣ್ಣ, ಅನಿಲ್, ಕಿಶೋರ್, ರಾಧಾಕೃಷ್ಣ, ಜಗದೀಶ್, ಪುಲಿಗಂರಾಘು, ವಿಶ್ವನಾಥ್, ಸುರೇಶ್, ವರುಣ್, ಎಸ್.ವಿ.ನಾಗೇಶ್ ಇತರರು ಭಾಗಿಗಳಾಗಿ ಶ್ರೀ ರಾಮನವಮಿಯ ಕೋಸಂಬರಿ ಪಾನಕವನ್ನು ಸಾರ್ವಜನಿಕರಿಗೆ ವಿತರಿಸಿದರು.
