
ಹಿರಿಯೂರು:
ನಗರದ ನೆಹರು ಮೈದಾನದಲ್ಲಿ 2026ಏಪ್ರಿಲ್ 25, ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಕನ್ನಡಿಗರ ಆರಾಧ್ಯ ದೈವ ಡಾ. ರಾಜಕುಮಾರ್ ಅವರ 97ನೇ ವರ್ಷದ ಜನ್ಮ ದಿನಾಚರಣೆ ಹಾಗೂ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶಂಕರ್ ನಾಗ್ ಅಭಿಮಾನಿಗಳ ಕಲಾವೇದಿಕೆ ವತಿಯಿಂದ ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂಬುದಾಗಿ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ವಿಶೇಷ ಆಕರ್ಷಣೆಯಾಗಿವೆ. ಕವಿಗೋಷ್ಠಿ, ಭರತನಾಟ್ಯ, ಭಜನೆ, ಉರುಮೆ, ತಮಟೆ ಹಾಗೂ ಜಾನಪದ ನೃತ್ಯ ಸ್ಪರ್ಧೆಗಳು ನಡೆಯಲಿವೆ.ರಾಜ್ಯದ ವಿವಿಧ ಭಾಗಗಳಿಂದ ಕವಿ ಮಿತ್ರರು ಹಾಗೂ ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ, ಪರಂಪರೆ ಹಾಗೂ ಕಲಾ ವೈವಿಧ್ಯತೆಯ ಮೆರಗು ಮೂಡಲಿದೆ.

ಆಸಕ್ತರು ತಮ್ಮ ಹೆಸರುಗಳನ್ನು 2026ಏಪ್ರಿಲ್ 15 ರ ಒಳಗಾಗಿ ನೋಂದಾಯಿಸಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹೆಚ್. ಸಿ. ದಿವುಶಂಕರ್ (ಜ್ಯೂ. ಶಂಕರ್ ನಾಗ್) ಅವರನ್ನು ಸಂಪರ್ಕಿಸಲು ವಿನಂತಿಸಲಾಗಿದೆ. ಸಂಪರ್ಕ ಸಂಖ್ಯೆ: 9972373897. ಈ ಸಾಂಸ್ಕೃತಿಕ ಮಹೋತ್ಸವವು ಕನ್ನಡಾಭಿಮಾನಿಗಳಿಗೆ ವಿಶೇಷ ಹಬ್ಬದಂತಾಗಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
