

ಹಿರಿಯೂರು:
ಪ್ರಧಾನಿ ನರೇಂದ್ರಮೋದಿಯವರು ಜಿ.ಎಸ್ಟಿ ಕಡಿತ ಮಾಡಿರುವುದರಿಂದ ಬಡವರಿಗೆ, ಸಣ್ಣಸಣ್ಣ ವ್ಯವಹಾರಗಳಿಗೆ ತುಂಬಾ ಅನುಕೂಲಕರವಾಗಲಿದೆ ಎಂಬುದಾಗಿ ಬಿ.ಜೆ.ಪಿ.ತಾಲ್ಲೂಕು ಅಧ್ಯಕ್ಷರಾದ ಕೆ.ಅಭಿನಂದನ್ ಅವರು ಹೇಳಿದರು.
ಕ್ರಾಂತಿಕಾರ ಎಂಬ ದೊಡ್ಡ ಹೆಜ್ಜೆಯಿಟ್ಟು, ತೆರಿಗೆ ಕಡಿತದಿಂದ ಯುವಕರಿಗೆ, ಮಹಿಳೆಯರಿಗೆ, ಉದ್ಯೋಗ ಮಿತ್ರರಿಗೆ ಬದುಕಿನಲ್ಲಿ ಆತ್ಮನಿರ್ಭರವನ್ನು ಸಹಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಯವರು ಮೊದಲ ಹೆಜ್ಜೆ ಇಟ್ಟಿರುವುದು ಶ್ಲಾಘನೀಯವಾಗಿದೆ ಎಂಬುದಾಗಿ ಅವರು ಹೇಳಿದರು.
ತುಪ್ಪ, ಪನೀರ್, ಬೆಣ್ಣೆ, ನಮ್ಕೀನ್, ಕೆಚಪ್, ಜಾಮ್, ಡ್ರೈ ಫ್ರೂಟ್ಸ್, ಕಾಫಿ ಅಗ್ಗವಾಗಲಿವೆ. ಅವುಗಳ ಮೇಲಿನ ಜಿ.ಎಸ್ಟಿ ದರಗಳು ಶೇಕಡಾ 12ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಹೇರ್ ಆಯಿಲ್, ಟಾಯ್ಲೆಟ್ ಸೋಪ್ ಬಾರ್ ಗಳು, ಶಾಂಪೂಗಳು, ಟೂತ್ ಬ್ರಷ್ ಗಳು ಮತ್ತು ಟೂತ್ ಪೇಸ್ಟ್ ನಂತಹ ಉತ್ಪನ್ನಗಳು ಈಗ ಶೇಕಡಾ 5ರಷ್ಟು ಜಿ.ಎಸ್ಟಿ ಅನ್ನು ಆಕರ್ಷಿಸುತ್ತವೆ.
ಟಾಲ್ಕಮ್ ಲೋಷನ್ ಗಳು, ಸಹ ಶೇಕಡಾ,5ರಷ್ಟು ಜಿ.ಎಸ್ಟಿ ಸ್ಲ್ಯಾಬ್ ನಲ್ಲಿವೆ.ಇದಲ್ಲದೆ, ದ್ವಿಚಕ್ರವಾಹನಗಳ ಮೇಲಿನ ಜಿ.ಎಸ್ಟಿ ಕೂಡ ಶೇಕಡಾ18 ಆಗಿರುತ್ತದೆ. ಇದರಿಂದ ಬಡವರಿಗೆ ತುಂಬಾ ಅನುಕೂಲವಾಗಲಿದೆ. ದೂರದೃಷ್ಠಿ ಹಾಗೂ ದೇಶದ ಬಡ ಜನರ ಹಿತಕ್ಕಾಗಿ ಪ್ರಧಾನಿ ಸಂಕಲ್ಪ ಹೊಂದಿದ್ದು, ನವರಾತ್ರಿ ಹಾಗೂ ದಸರಾ ಹಬ್ಬಕ್ಕೆ ಕೊಡುಗೆ ನೀಡಿದ್ದಾರೆ ಎಂಬುದಾಗಿ ಅವರು ಹೇಳಿದರು.