

ಹಿರಿಯೂರು:
ನಗರದ ನಗರಸಭೆ ಅಧ್ಯಕ್ಷರಾದ ಆರ್.ಬಾಲಕೃಷ್ಣರವರ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕ ದಿನಾಚರಣೆಯ ಪ್ರಯುಕ್ತ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ನಗರಸಭಾ ಕಚೇರಿಯಿಂದ ನಗರದ ಮುಖ್ಯರಸ್ತೆಗಳಿಂದ ರಂಜಿತ್ ಹೋಟೆಲ್ ವರೆಗೂ ಹಾಗು ರಂಜಿತ್ ಹೋಟೆಲ್ ನಿಂದ ಟಿ.ಬಿ. ಸರ್ಕಲ್ ವರೆಗೂ ಬೈಕ್ ರ್ಯಾಲಿ ನಡಿಸಿ ಟಿ. ಬಿ. ಸರ್ಕಲ್ ನಲ್ಲಿ ಇರುವ ಡಾ||ಬಿ. ಆರ್. ಅಂಬೇಡ್ಕರ್ ರವರ ಪ್ರತಿಮೆಗೆಮಲಾರ್ಪಣೆ ಯೊಂದಿಗೆ ಬೈಕ್ ರ್ಯಾಲಿ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪೌರಾಯುಕ್ತರಾದ ಎ.ವಾಸೀಂ, ನಗರಸಭೆಯ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಹಾಗೂ ಗೌರವಾನ್ವಿತ ಸದಸ್ಯರು ಮತ್ತು ನಾಮನಿರ್ದೇಶನ ಸದಸ್ಯರುಗಳು ಅಧಿಕಾರಿಗಳು, ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳು, ಪೌರಕಾರ್ಮಿಕರು, ವಾಹನ ಚಾಲಕರು ಮತ್ತು ನೀರು ಸರಬರಾಜು ಸಿಬ್ಬಂದಿ ವರ್ಗದವರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.