
ಹಿರಿಯೂರು:
ನಗರದಲ್ಲಿ ಇತಿಹಾಸ ಪ್ರಸಿದ್ಧ ಪಡೆದಿರುವ ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರ ಸ್ವಾಮಿ ದಸರಾ ಅಂಬಿನೋತ್ಸವ ಅಕ್ಟೋಬರ್ 10ರ ಗುರುವಾದಂದು ನಡೆಯಲಿದೆ ಎಂಬುದಾಗಿ ತಾಲ್ಲೂಕು ತಹಶೀಲ್ದಾರ್ ಹಾಗೂ ಮುಜುರಾಯಿ ಅಧಿಕಾರಿಗಳಾದ ಎಂ.ಸಿದ್ದೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಕ್ಟೋಬರ್ 1ರ ಬುಧವಾರ ದಂದು ಆಯುಧಪೂಜೆಯಿರುತ್ತದೆ. ಸಂಜೆ 6ರಿಂದ 9ಗಂಟೆಯವರೆಗೆ ಶ್ರೀ ತೇರುಮಲ್ಲೇಶ್ವರಸ್ವಾಮಿ ಮತ್ತು ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಕುದುರೆಉತ್ಸವ ಹಾಗೂ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಸರಪಳಿಯನ್ನು ಗಂಗಾಪೂಜೆಗೆ ತೆಗೆದುಕೊಂಡು ಹೋಗಲಾಗುವುದು.

ಅಕ್ಟೋಬರ್ 01ರ ಗುರುವಾದಂದು ಮಧ್ಯಾಹ್ನ 3ಗಂಟೆಗೆ ತಾಲ್ಲೂಕಿನ ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರಸ್ವಾಮಿ ದೇವರು ಮತ್ತು ಎಲ್ಲಾ ಪ್ರಮುಖ ದೇವರುಗಳು ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ, ನಂತರ ಸಂತೇಪೇಟೆಯಲ್ಲಿರುವ ಬನ್ನಿ ಮಂಟಪಕ್ಕೆ ಸಂಜೆ 4ಗಂಟೆಗೆ ಬನ್ನಿ ಮುಡಿಯುವುದು ಹಾಗೂ ದಸರಾ ಅಂಬಿನೋತ್ಸವಕ್ಕೆ ಚಾಲನೆ ಹಾಗೂ ಮಹಾಮಂಗಳಾರತಿ ನಡೆಯುವುದು ಎಂಬುದಾಗಿ ಅವರು ಹೇಳಿದರು.
ಅಕ್ಟೋಬರ್ 03ರ ಶುಕ್ರವಾರದಂದು ಬೆಳಗ್ಗೆ 9ರಿಂದ ಮಧ್ಯಾಹ್ನ2ರವರೆಗೆ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ದೇವರ ದೋಣಿ ಸೇವೆ ಇರುತ್ತದೆ. ಮಧ್ಯಾಹ್ನ 2.30ರಿಂದ ಪ್ರಾರಂಭಗೊಂಡು ಪವಾಡ ಮುಗಿಯುವವರೆಗೂ ನಡೆಯುತ್ತದೆ.

ಶ್ರೀತೇರುಮಲ್ಲೇಶ್ವರಸ್ವಾಮಿ ಹಾಗೂ ಪಾರ್ವತಿದೇವಿಗೆ ದಸರಾ ಉತ್ಸವದ ಅಂಗವಾಗಿ ಮಹಾಲಯ ಅಮವಾಸ್ಯೆಯಿಂದ ವಿಯದಶಮಿಯವರೆಗೆ ನವರಾತ್ರಿ 9ದಿನಗಳಿಂದ ವಿಶೇಷ ಅಲಂಕಾರಸೇವೆ ಹಾಗೂ ಪ್ರಸಾದಸೇವೆ ಇರುತ್ತದೆ.
ಅಲ್ಲದೆ, ಶ್ರೀತೇರುಮಲ್ಲೇಶ್ವರಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ಹಾಗೂ ಗರ್ಭ ಗುಡಿಯಲ್ಲಿ ವಿಶೇಷ ಹೂವುಗಳಿಂದ ಪುಷ್ಪಾಲಂಕಾರ ಮತ್ತು ನಗರದ ಟಿ.ಬಿ.ರಸ್ತೆಯಿಂದ ಬಿ.ಇ.ಓ.ಕಚೇರಿಯವರೆಗೆ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗುತ್ತದೆ.

ಅಕ್ಟೋಬರ್ 02ರ ವಿಜಯದಶಮಿಯ ಅಂಬಿನೋತ್ಸವಕ್ಕೆ ಶ್ರೀತೇರುಮಲ್ಲೇಶ್ವರ ಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದವರೆಗೆ ವಿಶೇಷ ವಾದ್ಮೇಳ ಹಾಗೂ ವೀರಗಾಸೆ ನೃತ್ಯ ಮತ್ತು ಕಲಾ ತಂಡಗಳ ಮೆರವಣಿಗೆ ಇರುತ್ತದೆ ಎಂಬುದಾಗಿ ಅವರು ಹೇಳಿದರು.
ಆದ್ದರಿಂದ ತಾಲ್ಲೂಕಿನ ಎಲ್ಲಾ ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಶ್ರೀತೇರುಮಲ್ಲೇಶ್ವರಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ಆಡಳಿತಾಧಿಕಾರಿಗಳು, ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ದೇವಸ್ಥಾನದ ಕೈವಾಡಸ್ಥರುಗಳು ಮನವಿ ಮಾಡಿದ್ದಾರೆ.