
ಹಿರಿಯೂರು :
ನಗರದ ಗ್ರಾಮಾಂತರ ಪೊಲೀಸ್ ಠಾಣೆಗೆ ಪಿ.ಎಸ್.ಐ ಆಗಿ ನೂತನವಾಗಿ ಬಂದಿರುವ ಆತ್ಮೀಯರಾದ ಕಾಂತರಾಜ್ ರವರಿಗೆ ಅಭಿಮತ ವಾರಪತ್ರಿಕೆಯ ಸಂಪಾದಕರಾದ ಜಿ.ಎಲ್.ಮೂರ್ತಿಯವರ ನೇತೃತ್ವದಲ್ಲಿ ದಲಿತ ಮುಖಂಡರುಗಳು ಆದಿಜಾಂಬವ ಅಭಿವೃದ್ಧಿ ನಿಗಮದ ಕ್ಯಾಲೆಂಡರ್ ಮತ್ತು ಡೈರಿಯನ್ನು ನೀಡುವ ಮೂಲಕ ಶುಭಕೋರಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಪ್ರದೀಪ್ ಕುಮಾರ್, ವಕೀಲರಾದ ನಾಗರಾಜ್, ಇತರೆ ದಲಿತ ಮುಖಂಡರುಗಳು ಉಪಸ್ಥಿತರಿದ್ದರು.
