
ಹಿರಿಯೂರು:
ಭಾರತದಲ್ಲಿ ಕ್ಯಾನ್ಸರ್ ರೋಗದಿಂದಾಗಿ ವರ್ಷಕ್ಕೆ ಸುಮಾರು 67 ಸಾವಿರ ಜನರು ಸಾವಿಗೀಡಾಗುತ್ತಿದ್ದಾರೆ ಎಂಬುದು ವಿಷಾದದ ಸಂಗತಿ ಎಂಬುದಾಗಿ ಜಿಲ್ಲಾ ರೆಡ್ ಕ್ರಾಸ್ ಚೇರ್ಮನ್ ರೋಟರಿ ಮಾಜಿ ಅಧ್ಯಕ್ಷರಾದ ಗಾಯಿತ್ರಿ ಶಿವರಾಂ ಅವರು ಹೇಳಿದರು.
ನಗರದ ರೋಟರಿ ಸಭಾಭವನದಲ್ಲಿ ರೆಡ್ ಕ್ರಾಸ್, ರೋಟರಿ, ಸರ್ವೋದಯ ಥಿಯೋಸಾಫಿಕಲ್ ಸೊಸೈಟಿ ಮತ್ತು ಹೆಲ್ಪ್ ಸಂಸ್ಥೆ ಹಿರಿಯೂರು, ಚಿತ್ರದುರ್ಗ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎಸ್.ಜೆ.ಎಂ. ಗರ್ಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ನಡೆಸಲಾದ ಕ್ಯಾನ್ಸರ್ ಜಾಗೃತಿ ಉಪನ್ಯಾಸ ಬೃಹತ್ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ನಡೆಸಿ ಅವರು ಮಾತನಾಡಿದರು.
ಕ್ಯಾನ್ಸರ್ ಕಾಯಿಲೆ ಜನರಲ್ಲಿ ಹೆಚ್ಚು ಹೆಚ್ಚು ಹರಡುತ್ತಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಳಜಿ ವಹಿಸಿ ಈ ರೋಗಕ್ಕೆ ಹೆಚ್ಚು ವ್ಯಾಕ್ಸಿನೇಷನ್ ದೊರಕಿಸಿ ಭಾರತ್ ಕ್ಯಾನ್ಸರ್ ಮುಕ್ತಕ್ಕಾಗಿ ಗಮನ ಕೊಡಬೇಕು. ಪುರುಷರು , ಮಹಿಳೆಯರು, ಮಕ್ಕಳು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದರಲ್ಲದೆ,
ರೆಡ್ ಕ್ರಾಸ್, ರೋಟರಿಸಂಸ್ಥೆಗಳು ಜಾತ್ಯಾತೀತವಾಗಿ ಆರೋಗ್ಯ ರಕ್ಷಣಾ ಶಿಬಿರಗಳು ನಡೆಸುತ್ತಿರುವುದು ಸಂತೋಷದ ವಿಚಾರ ಮತ್ತು ಇವರ ಸೇವೆಗಾಗಿ ಪ್ರತಿ ವರ್ಷ ವು ರಾಜ್ಯ ರೆಡ್ ಕ್ರಾಸ್ ನ ರಾಜ್ಯಪಾಲರಿಂದ ಪ್ರಶಸ್ತಿಗಳನ್ನು ಗಳಿಸುತ್ತಿದೆ.
ಈ ತಾಲ್ಲೂಕಿನಲ್ಲಿ ರೆಡ್ ಕ್ರಾಸ್ ಸಂಸ್ಥೆ ಒಂದು ಉತ್ತಮ ಸೇವಾಸಂಸ್ಥೆ ಎನಿಸಿಕೊಂಡಿದೆ. ಜೊತೆಗೆ ಕ್ಯಾನ್ಸರ್ ಜಾಗೃತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಈ ಕ್ಯಾನ್ಸರ್ ರೋಗದ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ, ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂಬುದಾಗಿ ಅವರು ಹೇಳಿದರು.
ಕ್ಯಾನ್ಸರ್ ರೋಗವನ್ನು ಮೊದಲೇ ತಿಳಿದು ಬಂದಲ್ಲಿ ಅವರನ್ನು ಗುಣಪಡಿಸಬಹುದಾಗಿದೆ.ಜೊತೆಗೆ ಕ್ಯಾನ್ಸರ್ ಯಾವ ರೀತಿ ಬರುತ್ತದೆ ಎಂದು ಗುರುತಾಗುವುದಿಲ್ಲ. ಆದ ಕಾರಣ ಈ ಸೇವಾಸಂಸ್ಥೆಗಳು ಕ್ಯಾನ್ಸರ್ ಜಾಗೃತಿಗಾಗಿ ಮುಂದಾಗಬೇಕು ಎಂಬುದಾಗಿ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಂಜೀವಿನಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಲತಾರಾಮಚಂದ್ರಪ್ಪ ಅವರು ಕ್ಯಾನ್ಸರ್ ಬಗ್ಗೆ ತೋಟಗಾರಿಕಾ ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಸವೇಶ್ವರ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾ.ಜಯಚಂದ್ರ, ಡಾ.ಧನುಷ್, ಡಾ.ಚೇತನ, ಡಾ.ಅಕ್ಷತ, ಡಾ.ರುಚಿತಾ, ಡಾ.ಪ್ರಶಾಂತ್, ಡಾ.ಪ್ರಕೃತಿ, ಡಾ.ಸುಹಾಸ್, ಡಾ.ನಿತಿನ್, ಹೆಲ್ಪ್ ಸಂಸ್ಥೆಯ ಆರ್.ವೈ. ಸ್ವಾಮಿ, ಕೋ-ಆರ್ಡಿನೇಟರ್ ಗಳಾದ ರವಿಕುಮಾರ್ ಮತ್ತು ಅಭಿಷೇಕ್ ಮತ್ತು ಸಿಬ್ಬಂದಿ, ರೆಡ್ ಕ್ರಾಸ್ ಚೇರ್ಮನ್ ಹೆಚ್. ಎಸ್. ಸುಂದರಾಜ್, ಯೂತ್ ರೆಡ್ ಕ್ರಾಸ್ ನ ಶಶಿಕಲಾರವಿಶಂಕರ್, ವೈಸ್ ಛೇರ್ಮನ್ ಬಿ.ಕೆ. ನಾಗಣ್ಣ, ಎಂ.ಎಸ್.ರಾಘವೇಂದ್ರ, ಎಸ್.ಜೋಗಪ್ಪ, ಸಣ್ಣಭೀಮಣ್ಣ, ಕೆ.ಎಸ್.ಮಹಾಬಲೇಶ್ವರಶೆಟ್ಟಿ, ದೇವರಾಜ್ ಮೂರ್ತಿ, ಪಿ.ಆರ್. ಸತೀಶ್ ಬಾಬು, ಪರಮೇಶ್ವರ್ ಭಟ್, ರೋಟರಿಗಳಾದ ಎಲ್. ಆನಂದಶೆಟ್ಟಿ, ಟಿ. ಮಲ್ಲೇಶಪ್ಪ, ರಂಗನಾಥಪ್ಪ, ಶಿವಲಿಂಗಮೂರ್ತಿ, ಮಹಿಳಾ ರೆಡ್ ಕ್ರಾಸ್ ಅಧ್ಯಕ್ಷರಾದ ಗೀತಾರಾಧಕೃಷ್ಣ, ಉಪಾಧ್ಯಕ್ಷರಾದ ನಾಗಸುಂದರಮ್ಮಸುಬ್ಬಣ್ಣಶೆಟ್ಟಿ, ಚಂದ್ರವದನಾಸತ್ಯಮೂರ್ತಿ, ಶೋಭನಾಗರಾಜ್, ಪದ್ಮಜಾಎಂ.ಶೆಟ್ಟಿ, ಪಾರ್ವತಮ್ಮ, ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಯೂತ್ ರೆಡ್ ಕ್ರಾಸ್ ವಿದ್ಯಾರ್ಥಿಗಳು ಮತ್ತು ಫ್ರೊಫೆಸರ್ ಗುರುದೇವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
