
ಹಿರಿಯೂರು :
ತಾಲ್ಲೂಕಿನ ಯಲ್ಲದಕೆರೆ ಗ್ರಾಮದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮಾರ್ಚ್ 4 ರಂದು ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ವೈ.ಸಿ.ಶ್ರೀನಿವಾಸ್ ಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಡಿ.ದಾಸಪ್ಪಸೀಗೆಹಟ್ಟಿ ಇವರುಗಳು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯಲ್ಲದಕೆರೆ ಗ್ರಾಮದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರುಗಳಾಗಿ ರಮೇಶ್, ನಾಗಣ್ಣ, ಶಿವಣ್ಣ, ಮಂಜಣ್ಣ, ವೈ.ಕಣುಮಪ್ಪ, ಶಿವಣ್ಣ, ಶ್ರೀಮತಿ ಕಮಲಮ್ಮ, ಶ್ರೀಮತಿ ಮಂಜುಳಾ, ಬಿ.ಎಂ. ಬಾಲಣ್ಣ ಇವರುಗಳು ಆಯ್ಕೆಯಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ಸಿ.ಜಯರಾಮ್ ಇವರು ಜೊತೆಯಲ್ಲಿದ್ದರು.
