March 5, 2026
0001

ಹಿರಿಯೂರು :

ರೈತ ಹೋರಾಟಗಾರರಾಗಿ, ಪತ್ರಕರ್ತರಾಗಿ ಜನಪ್ರಿಯತೆಗಳಿಸಿ, ಕೊಡುಗೈ ದಾನಿಯಾಗಿ ಜನರ ಮನಗೆದ್ದಿರುವ ಶ್ರೀಯುತ ಆಲೂರುಹನುಮಂತರಾಯಪ್ಪನವರು ವಿವಿಧ ದೇವಸ್ಥಾನಗಳಿಗೆ ಕಾಲೇಜುಗಳಿಗೆ ಹಾಗೂ ಆಶ್ರಮಗಳಿಗೆ ದೇಣಿಗೆಯನ್ನು ನೀಡುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇವರಿಗೆ ಆ ಭಗವಂತನು ಉತ್ತಮ ಆರೋಗ್ಯ, ಆಯಸ್ಸು ಯಶಸ್ಸು ದಯಪಾಲಿಸಲಿ ಎಂಬುದಾಗಿ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್ ಹೇಳಿದರು.

ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶ್ರೀಯುತ ಆಲೂರು ಹನುಮಂತರಾಯಪ್ಪನವರ ಹುಟ್ಟುಹಬ್ಬದ ಅಂಗವಾಗಿ ಅವರಿಗೆ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಶಾಲು ಹೊದಿಸಿ, ಸನ್ಮಾನಿಸಿ, ಪುಷ್ಪಮಾಲೆ ಹಾಕಿ ಹುಟ್ಟುಹಬ್ಬಕ್ಕೆ ಶುಭಹಾರೈಸಿ, ಮಾತನಾಡಿದರು.

ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಇದೀಗ ರೆಡ್ ಕ್ರಾಸ್ ಸಂಸ್ಥೆಗೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ಅಂಬ್ಯುಲೈನ್ಸ್ ಕೊಡುಗೆಯಾಗಿ ನೀಡಲಾಗುತ್ತಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯಿಂದ ಸಂಚರಿಸುವ ಮೊದಲ “ಉಚಿತ ಅಂಬ್ಯುಲೈನ್ಸ್ ಸೇವೆ” ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ, ಇದಕ್ಕೆ ಕಾರಣಕರ್ತರಾದ ಆಲೂರು ಹನುಮಂತರಾಯಪ್ಪನವರಿಗೆ  ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳು ಎಂದರಲ್ಲದೆ,

ಆಲೂರು ಹನುಮಂತರಾಯಪ್ಪನವರು ಕೊಡುಗೆ ನೀಡುವ ಈ ಅಂಬ್ಯುಲೈನ್ಸ್ ನಿರ್ವಹಣೆಯ ವೆಚ್ಚ ಹಾಗೂ ಜವಾಬ್ದಾರಿಯನ್ನು ರೆಡ್ ಕ್ರಾಸ್ ಸಂಸ್ಥೆ ನಿರ್ವಹಿಸಲಿದ್ದು, ಇದನ್ನು ಬಳಸುವವರಿಗೆ ಅಂಬ್ಯುಲೈನ್ಸ್ ಬಾಡಿಗೆ ಉಚಿತವಾಗಿದ್ದು, ಆದರೆ ಪ್ರಯಾಣಕ್ಕೆ ಬೇಕಾದ ಡೀಸೆಲ್ ವ್ಯವಸ್ಥೆಯನ್ನು ಬಳಕೆದಾರರು ಕೊಡಬೇಕಿದೆ, ನಗರದಲ್ಲಿ ತುರ್ತು ಅಂಬ್ಯುಲೆನ್ಸ್ ಸೇವೆ ಅಗತ್ಯವಿರುವವರಿಗೆ ಅನುಕೂಲವಾಗಲು ರೆಡ್ ಕ್ರಾಸ್ ಸಂಸ್ಥೆಗೆ ಈ ಅಂಬ್ಯುಲೈನ್ಸ್ ಕೊಡುಗೆ ನೀಡಿರುವ ಆಲೂರು ಹನುಮಂತರಾಯಪ್ಪನವರ ಸೇವೆ ಜಿಲ್ಲೆಯಲ್ಲೇ ಒಂದು ಮಾದರಿ ಕಾರ್ಯವಾಗಲಿದೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಚೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಖಜಾಂಚಿ ಸಣ್ಣಭೀಮಣ್ಣ, ನಿರ್ದೇಶಕರುಗಳಾದ ಟಿ.ಮಲ್ಲೇಶಪ್ಪ, ಎಲ್.ಆನಂದಶೆಟ್ಟಿ, ದೇವರಾಜ್ ಮೂರ್ತಿ, ಥಿಯಾಸಫಿಕಲ್ ರಂಗನಾಥಪ್ಪ, ಉಮೇಶ್ ಯಾದವ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *