March 6, 2026
00007

ಹಿರಿಯೂರು:

ತಾಲ್ಲೂಕು ಕಿಸಾನ್ ಘಟಕದ ಹೊಸ ಹುದ್ದೆಗಳ ಆಯ್ಕೆಯನ್ನು  ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಸಮ್ಮುಖದಲ್ಲಿ ರೈತರ ಹಿತದೃಷ್ಟಿಯಿಂದ ನೆರವೇರಿಸಲಾಯಿತು.

ಹೊಸ ತಂಡದ ಅಧ್ಯಕ್ಷರಾಗಿ  ಜೆ.ಜಿ.ಹಳ್ಳಿ ಕೇಶವ್, ಉಪಾಧ್ಯಕ್ಷರಾಗಿ  ಮಾರುತಿ (ಸ್ಟೀಫನ್),ಪ್ರಧಾನ ಕಾರ್ಯದರ್ಶಿಯಾಗಿ ಸಿ.ರವಿ, ಖಜಾಂಚಿಯಾಗಿ ಪಾಲಾಕ್ಷ ಯಾದವ್, ಕಾತ್ರಿಕೇನಹಳ್ಳಿ  ಹಾಗೂ ಕಾರ್ಯದರ್ಶಿಗಳಾಗಿ ವಿಶ್ವ (ಗಿಲ್ಲಿ), ಕಾರ್ತಿಕ್ ಮಂಜುನಾಥ್, ಸಾಯದ್ ಜಬಿವುಲ್ಲಾ, ಜಿ.ಎಂ.ಅರುಣ್, ಮಂಜುನಾಥ್, ಇರ್ಫಾನ್ ಆಯ್ಕೆಯಾಗಿದ್ದಾರೆ.

ರೈತರ ಧ್ವನಿಯಾಗಿ ನಿಂತು, ಬೀಜ–ಗೊಬ್ಬರ ಸರಬರಾಜು, ತೋಟಗಾರಿಕೆ ಮತ್ತು ಕೃಷಿಇಲಾಖೆಯಿಂದ ಬರುವ ಅನುದಾನಗಳ ಮಾಹಿತಿ, ರೈತರ ಕುಂದು-ಕೊರತೆಗಳಿಗೆ ಪರಿಹಾರ, ಹಾಗೂ ಭದ್ರಾಮೇಲ್ದಂಡೆ ಯೋಜನೆ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಈ ತಂಡವು ಹೊಂದಿದೆ.

ರೈತರ ಶ್ರಮಕ್ಕೆ ಬೆಲೆ ಸಿಗುವ ಸಮಾಜ ಕಟ್ಟುವ ಉದ್ದೇಶದಿಂದ, ಹೊಸ ತಂಡವು ತ್ಯಾಗ–ನಿಷ್ಠೆ ಹಾಗೂ ಸಕಾರಾತ್ಮಕ ಮನೋಭಾವದೊಂದಿಗೆ ಕೆಲಸ ಮಾಡುವ ಭರವಸೆಯನ್ನು ಅವರು  ನೀಡಿದರು.

About The Author

Leave a Reply

Your email address will not be published. Required fields are marked *