March 2, 2026
00006

ಹಿರಿಯೂರು:

ನಗರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಬೆಸ್ಕಾಂ ಇಲಾಖೆಯ ಕ್ಯಾಶ್  ಕೌಂಟರ್  ಅನ್ನು  ಹಲವು ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಆದರೆ, ಬೆಸ್ಕಾಂ ಬಿಲ್ ಕೌಂಟರ್  ನ್ನು ಇಂದಿನಿಂದ ಪುನಃ ಆರಂಭವಾಗಿದೆ ಎಂಬುದಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಗರದ ಸಾರ್ವಜನಿಕರ ಒತ್ತಾಯದ ಮೇರೆಗೆ ಬೆಸ್ಕಾಂ ಇಲಾಖೆಯ ಕ್ಯಾಶ್  ಕೌಂಟರ್  ಅನ್ನು ಪುನಃ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು  ಎಂಬುದಾಗಿ ಬೆಸ್ಕಾಂ ಇಲಾಖೆ ಅಧಿಕಾರಿಗಳು  ಮಾಧ್ಯಮಗಳಿಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *