March 2, 2026
00003

ಹಿರಿಯೂರು :

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ಜೊತೆಗೆ ತಂತ್ರಜ್ಞಾನ ಹಾಗೂ ಸೃಜನಶೀಲತೆ ಹೊಂದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ಒಳಗಾಗದೇ ಹೆಚ್ಚಿನ ಶ್ರದ್ಧೆ ಹಾಗೂ ಆಸಕ್ತಿಯಿಂದ ಓದುವ ಮೂಲಕ ಓದಿದ ಕಾಲೇಜಿಗೆ ಹಾಗೂ ಹೆತ್ತ ತಂದೆ-ತಾಯಿಗಳಿಗೆ ಕೀರ್ತಿ ತರಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪ್ರಾಂಶುಪಾಲರಾದ ಡಾ.ಆರ್.ಮಹೇಶ್ ಇವರ ವಯೋನಿವೃತ್ತಿ ಬೀಳ್ಕೊಡಿಗೆ ಸಮಾರಂಭ ಹಾಗೂ ನೂತನವಾಗಿ ನಿರ್ಮಾಣವಾಗಿರುವ ಸಭಾಭವನ ಮತ್ತು ಹೈಟೆಕ್ ಶೌಚಾಲಯ ಉದ್ಘಾಟನೆ, ಹಾಗೂ ನೂತನ ಕೊಠಡಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ, ನಂತರ ಅವರು ಮಾತನಾಡಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ವಾಣಿ ಕಾಲೇಜಿನಲ್ಲಿ ನೂತನ ಸಭಾಭವನ ನಿರ್ಮಾಣ ಮತ್ತು ಹೈಟೆಕ್ ಶೌಚಾಲಯ ಉದ್ಘಾಟನೆ ಮಾಡಲಾಗುತ್ತಿದೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಕಾಂಗ್ರೆಸ್ ಸರ್ಕಾರದ ಗುರಿವಾಗಿದೆ ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಮಹೇಶ್ ರವರು ವಯೋನಿವೃತ್ತಿ ಹೊಂದುತ್ತಿರುವುದರಿಂದ ಡಾ.ಡಿ.ಧರಣೇಂದ್ರಯ್ಯರವರಿಗೆ ಮುಂದಿನ ಅವಧಿಗೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರವನ್ನು ಹಸ್ತಾಂತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನೂತನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ, ನಿವೃತ್ತ ಪ್ರಾಂಶುಪಾಲರಾದ ಡಾ.ಮಹೇಶ್, ಎಸ್.ಡಿ.ಸಿ ಸದಸ್ಯರುಗಳಾದ ಪ್ರೇಮ್ ಕುಮಾರ್, ಅಶೋಕ್, ಡಾ.ಸಿದ್ಧಲಿಂಗಯ್ಯ, ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ದಿಂಡಾವರ ಮಹೇಶ್, ಸಿಂಡಿಕೇಟ್ ಸದಸ್ಯರಾದ ಹೆಚ್.ತಿಪ್ಪೇಸ್ವಾಮಿ, ಬಸವರಾಜುಬಳಗಟ್ಟ, ಗಂಗಾಧರ್, ರಾಮಣ್ಣ, ಎಸ್.ಎಲ್.ಎನ್.ಮೂರ್ತಿ,   ಡಾ.ದೇವಿಕಾ, ಹೇಮಲತಾ, ಪ್ರೋ.ವಲಿ, ನರಸಿಂಹಮೂರ್ತಿ, ಮಹಂತೇಶ್, ಲಕ್ಷ್ಮಣ್ ನಾಯ್ಕ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *