
ಹಿರಿಯೂರು:
ಭಾರತೀಯ ಜನತಾ ಪಾರ್ಟಿ ಹಿರಿಯೂರು ಮಂಡಲದ ನೂತನ ಕಚೇರಿ ಉದ್ಘಾಟನಾ ಸಮಾರಂಭವು ಪೂಜಾ, ಹೋಮ, ಹವನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಮಲ್ಲೇಶ್ವರ ಬಡಾವಣೆ, ಪುಷ್ಪಾಂಜಲಿ ಟಾಕೀಸ್ ರೋಡ್, ಹಳೆ ಕಚೇರಿಯ ಮುಂಭಾಗ ನೂತನ ಕಚೇರಿ ಪ್ರಾರಂಭಿಸಲಾಯಿತು.
ಚಿತ್ರದುರ್ಗ ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ ಅವರು ದೀಪ ಬೆಳಗಿಸುವ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿದರು.

ನಂತರ ಮಾತನಾಡಿ ಪಕ್ಷ ಬಲವರ್ಧನೆಗೆ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು. ಬಿ.ಜೆ.ಪಿ. ಮಂಡಲ ತಾಲ್ಲೂಕು ಅಧ್ಯಕ್ಷರು ಯುವಕರಾಗಿದ್ದು, ಜನಪರ ಕಾಳಜಿ ಹೊಂದಿರುವಂತಹ ಅಧ್ಯಕ್ಷರ ಜೊತೆ ಎಲ್ಲಾ ಕಾರ್ಯಕರ್ತರು ಕೈಜೋಡಿಸಿ ಪಕ್ಷವನ್ನು ಸಂಘಟಿಸಬೇಕು ಎಂಬುದಾಗಿ ಅವರು ಹೇಳಿದರು.
ತಾಲ್ಲೂಕು ಮಂಡಲ ಅಧ್ಯಕ್ಷರಾದ ಕೆ.ಅಭಿನಂದನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ನೂರಾರು ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಹಿತೈಷಿಗಳು ಬಾಗವಹಿಸಿದರು. ಪಕ್ಷದ ಹಿರಿಯರು, ವಿವಿಧ ಮೋರ್ಚಾ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಆಗಮಿಸಿದ್ದರು.

ನೂತನ ಕಚೇರಿ ಪಕ್ಷದ ಸಂಘಟನೆ ಬಲಸಂವರ್ಧನೆಗೆ ಹಾಗೂ ಜನಸೇವಾ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂಬುದಾಗಿ ಮುಖಂಡರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಬಿ.ಜೆ.ಪಿ. ಪಕ್ಷದ ಮುಖಂಡರುಗಳಾದ ಎನ್.ಆರ್.ಲಕ್ಷ್ಮೀಕಾಂತ್, ಮುರುಳಿ, ಮಾಧುರಿ, ಗಿರೀಶ್, ವಿಶ್ವನಾಥ್, ದ್ಯಾಮೇಗವಡ, ರಾಘವೇಂದ್ರ, ಸೋಮಣ್ಣ, ಜೆ.ಬಿ.ರಾಜು, ರವೀಂದ್ರಪ್ಪ, ಮಂಜುನಾಥ್, ಹನುಮಂತರಾಯಪ್ಪ ಸೇರಿದಂತೆ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ಕಾರ್ಯಕರ್ತರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.

