

ಹಿರಿಯೂರು:
ತಾಲ್ಲೂಕು ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಇತರೆ ಅಭಿಯಂತರರು ಹಾಗೂ ಅಧಿಕಾರಿಗಳೊಂದಿಗೆ ರೈತರ ಹಲವಾರು ಕುಂದುಕೊರತೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಉಪಾಧ್ಯಕ್ಷ ಕೆ.ಸಿ.ಹೊರಕೆರಪ್ಪ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಯಾ ಸೆಕ್ಷನ್ ಇಂಜಿನಿಯರ್ ಗಳಿಗೆ ಕಾಲಕಾಲಕ್ಕೆ ರೈತರಿಗೆ ಯಾವುದೇ ಕುಂದುಕೊರತೆಗಳು ಬಾರದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಯಾವುದೇ ಸಮಯದಲ್ಲಿ ರೈತರು ಹಾಗೂ ರೈತ ಮುಖಂಡರು ಕರೆ ಮಾಡಿದರೆ ಉತ್ತರಿಸಬೇಕಾಗಿ ಇಂಜಿನಿಯರ್ ಗಳು ಹಾಗೂ ಲೈನ್ ಮ್ಯಾನ್ ಗಳಿಗೆ ಅವರು ಸೂಚಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗಿಯ ಉಪಾಧ್ಯಕ್ಷ ಕೆ. ಸಿ. ಹೊರಕೆರಪ್ಪ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬಿ.ಓ.ಶಿವಕುಮಾರ್, ಜಿಲ್ಲಾರೈತ ಸಂಘದ ಉಪಾಧ್ಯಕ್ಷರಾದ ಎಂ.ಲಕ್ಷ್ಮಿಕಾಂತ್, ಯುವ ಘಟಕದ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಯಳನಾಡು ಆರ್ ಚೇತನ್, ಕೆ.ಟಿ. ತಿಪ್ಪೇಸ್ವಾಮಿ ಹಾಗೂ ಆಲೂರುಸಿದ್ದರಾಮಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.