
ಬೆಂಗಳೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ಊರಿನ ಹಿರಿಯರ ಮತ್ತು ಶಾಲೆ ಸಮಿತಿ ಪರವಾಗಿ ಪವರ್ ಫೋಕಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿರವರು ಮಾನ್ಯ ಶಿಕ್ಷಣ ಸಚಿವರಾದ ಶ್ರೀಯುತ ಮಧುಬಂಗಾರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ವಿಶೇಷ ಮನವಿಪತ್ರ ಸಲ್ಲಿಸಿದರು.
ಸಚಿವರ ನಿವಾಸಕ್ಕೆ ಭೇಟಿ ನೀಡಿದ ಅರ್ಜುನ್ ಬ್ಯಾಡರಹಳ್ಳಿರವರು ಬ್ಯಾಡರಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿಗಳಿಲ್ಲದೆ 100ಕ್ಕೂ ಹೆಚ್ಚು ಮಕ್ಕಳು ಮರದ ಕೆಳಗೆ ಕುಳಿತು ಪಾಠ ಕೇಳುತ್ತಿರುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೊಠಡಿ ನಿರ್ಮಾಣಕ್ಕೆ ಮುಂದಾಗುವಂತೆ ಸಚಿವರ ಗಮನಕ್ಕೆ ತಂದರು.
ಮನವಿಯನ್ನು ಸಮಾಧಾನದಿಂದ ಆಲಿಸಿದ ಸಚಿವರಾದ ಮಧುಬಂಗಾರಪ್ಪ ಅವರ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನದ ಅಧಿಕಾರವನ್ನು ಹಿರಿಯೂರು ಕ್ಷೇತ್ರದ ಶಾಸಕರಾದ ಡಿ.ಸುಧಾಕರ್ ರವರಿಗೆ ನೀಡಲಾಗಿದೆ ಎಂಬುದಾಗಿ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಈ ಕುರಿತು ಶಾಸಕರಾದ ಡಿ.ಸುಧಾಕರ್ ಅವರಿಗೆ ತಕ್ಷಣ ಮಾಹಿತಿ ನೀಡಿ, ಬ್ಯಾಡರಹಳ್ಳಿ ಶಾಲೆಯ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸುವುದಾಗಿ ಸಚಿವರಾದ ಮಧುಬಂಗಾರಪ್ಪ ಅವರು ಅರ್ಜುನ್ ಬ್ಯಾಡರಹಳ್ಳಿ ರವರಿಗೆ ಭರವಸೆ ನೀಡಿದರು.
ಕಳೆದ ಒಂದು ವರ್ಷದಿಂದ ಅನುದಾನವಿಲ್ಲದೆ ನನೆಗುದಿಗೆ ಬಿದ್ದಿದ್ದ ಶಾಲಾ ಕಟ್ಟಡದ ಸಮಸ್ಯೆಗೆ ಶಿಕ್ಷಣ ಸಚಿವರ ಈ ನೇರ ಭರವಸೆಯಿಂದ ಹೊಸ ಆಶಾವಾದ ಮೂಡಿದೆ ಎಂಬುದಾಗಿ ಪವರ್ ಫೋಕಸ್ ಮುಖ್ಯಸ್ಥರಾದ ಅರ್ಜುನ್ ಬ್ಯಾಡರಹಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.

