
ಹಿರಿಯೂರು :
ಹಿರಿಯೂರು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ. ಅಮೃತೇಶ್ವರಸ್ವಾಮಿರವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ವತಿಯಿಂದ ಕಸಬಾ ಹೋಬಳಿಯ 1ನೇ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಕಸಬಾ ಹೋಬಳಿಯ ಅಧ್ಯಕ್ಷರಾದ ಪೊಲೀಸ್ ಬೇಟೆ ಪ್ರಸನ್ನ ರವರು ವಹಿಸಿದ್ದರು. 1ನೇ ಕಸಬಾ ಹೋಬಳಿ ಸಾಹಿತ್ಯ ಸಮ್ಮೇಳನದ ಲೋಗೋವನ್ನು ಹಿರಿಯೂರು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ.ಅಮೃತೇಶ್ವರಸ್ವಾಮಿ ಇವರು ಬಿಡುಗಡೆ ಮಾಡಿದರು.
ಈ ಸಭೆಯಲ್ಲಿ ಹಿರಿಯೂರು ಶಾಲಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ.ಅಮೃತೇಶ್ವರಸ್ವಾಮಿ ಇವರನ್ನು ೧ನೇ ಕಸಬಾ ಹೋಬಳಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಅನುಮೋದಿಸಲಾಯಿತು.
ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಗೌರವ ಕಾರ್ಯದರ್ಶಿ ಅಜ್ಗರ್ ಅಹಮದ್, ಜಿ.ಆರ್. ನಂದವರಿಕ್, ಶ್ರೀಮತಿ ಶಿವರಂಜಿನಿ, ಉಮಾಶಂಕರ್, ಹೊರಕೇರಪ್ಪ, ಟಿ.ಆರ್.ದಾಸ್, ಗ್ಯಾಸ್ ವಿಜಯ್, ಶಿವಮೂರ್ತಿ (ಶಿವಣ್ಣ), ಸಿ.ನಾಗೇಂದ್ರಪ್ಪ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

