
ಹಿರಿಯೂರು :
ಭಜನೆ ಕಲಾವಿದರು, ಪಾಂಡುರಂಗ ಭಜನೆ, ಕೋಲಾಟ, ಯಕ್ಷಗಾನ, ನಾಟಕ, ಏಕಪಾತ್ರಾಭಿನಯ ಇತ್ಯಾದಿ ಕಲಾಪ್ರಕಾರಗಳಲ್ಲಿ ಪರಿಣಿತಿ ಪಡೆದ ಶ್ರೀಯುತ ಗುಣಯ್ಯನವರು [78] ವರ್ಷಗಳು ಕಸವನಹಳ್ಳಿ ಗ್ರಾಮದಲ್ಲಿ ಫೆಬ್ರವರಿ 24 ಮಂಗಳವಾರ ಬೆಳಿಗ್ಗೆ 4 ಗಂಟೆಗೆ ದೈವಾದೀನರಾಗಿದ್ದಾರೆ. ಶ್ರೀಯುತ ಗುಣಯ್ಯನವರ ನಿಧನಕ್ಕೆ “ಹಿರಿಯೂರುನ್ಯೂಸ್” ತಂಡದಿಂದ ಭಾವಪೂರ್ಣಶ್ರದ್ಧಾಂಜಲಿ ಅರ್ಪಿಸಲಾಗಿದೆ.
ಶ್ರೀಯುತ ಗುಣಯ್ಯನವರಿಗೆ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿಯರಿದ್ದಾರೆ, ಇವರ ಅಂತಿಮಸಂಸ್ಕಾರದ ವಿಧಿ ವಿಧಾನಗಳನ್ನು ಮಂಗಳವಾರ ಸಾಯಂಕಾಲ 4 ಗಂಟೆಗೆ ಅವರ ಸ್ವಗ್ರಾಮದಲ್ಲಿ ನೆರವೇರಿಸಲಾಯಿತು ಎಂಬುದಾಗಿ ಕುಟುಂಬದ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ತಿಳಿಸಿವೆ.
ಶ್ರೀಯುತ ಗುಣಯ್ಯರವರ ನಿಧನದ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬವರ್ಗದವರಿಗೆ ಕರುಣಿಸಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಅವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಶ್ರೀಪಾದ್ ವಸಿಷ್ಠ, ಪರಮೇಶ್ವರಪ್ಪ, ಶಿವರಾಜ್ ನಾಯಕ್, ಉಮೇಶ್ ಯಾದವ್, ಇನಾಯತ್ ವುಲ್ಲಾ, ಇರ್ಫಾನ್ ವುಲ್ಲಾ ಇವರುಗಳು ಸಂತಾಪ ಸೂಚಿಸಿದ್ದಾರೆ.

