
ಹಿರಿಯೂರು :
ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಹಾಗೂ ಬೆಳಕು ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಟ್ರಸ್ಟ್ ಇವರ ಸಹಯೋಗದಲ್ಲಿ ಹಿರಿಯೂರಿನ ಉಪನ್ಯಾಸಕ ಹಾಗೂ ಸಾಹಿತಿ ಡಾ.ಎಸ್.ಎಚ್ ಶಫೀಉಲ್ಲಾ ಇವರಿಗೆ ಇವರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಷ್ಟ್ರಮಟ್ಟದ “ಸಾಹಿತ್ಯ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರು ಸಂಧ್ಯಾರಗಳೆ ಮತ್ತು ಇತರ ಕಥೆಗಳು ಎಂಬ ಕಥಾ ಸಂಕಲನ, ಕಣ್ಮರೆ ಎಂಬ ಕಾದಂಬರಿಯನ್ನು ಪ್ರಕಟಿಸಿದ್ದಾರೆ. ಬೆಳಗು ಭಾವ ಎಂಬ ಶೀರ್ಷಿಕೆಡಿಯಲ್ಲಿ 1500ಕ್ಕೂ ಹೆಚ್ಚು ಪದ್ಯಗಳನ್ನು ಬರೆದಿದ್ದಾರೆ. ಇದರ ಬೆನ್ನಲ್ಲೇ ಕುಟೀಶನ ಕುಂಟೆ ಎಂಬ ಮುಕ್ತಕಗಳ ಸಂಕಲನ ಮುದ್ರಣ ಹಂತದಲ್ಲಿದೆ.
ಹಾಗೆಯೇ ಮತ್ತೊಂದು ಕವನ ಸಂಕಲನ, ಕಥಾಸಂಕಲನ ಹಾಗೂ ಬಿಡಿ ಲೇಖನಗಳ ಸಂಕಲನ ಮುದ್ರಣಕ್ಕೆ ಸಿದ್ದಗೊಂಡಿವೆ. ಪ್ರಸ್ತುತ ಈ ಪ್ರಶಸ್ತಿಯನ್ನು ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಮಾರ್ಚ್ 1ರಂದು ನಡೆಯುವ ರಾಷ್ಟ್ರಮಟ್ಟದ ಕಲಾ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ತನುಶ್ರೀ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವಧಿಕೆಯ ಸಂಸ್ಥಾಪಕರಾದ ರಾಜುಸೂಲೇನಹಳ್ಳಿ ತಿಳಿಸಿದ್ದಾರೆ.

