October 6, 2025
0002

ಹಿರಿಯೂರು :

ನಾವು ಆಡಳಿತಕ್ಕೆ ಬಂದ ಮೇಲೆ  ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಒಕ್ಕೂಟದಲ್ಲಿ ಲಾಭಾಂಶವಿದ್ದಾಗ ಮಾತ್ರ ಹಾಲು ಉತ್ಪಾದಕರಿಗೆ ಆತ್ಮಶಕ್ತಿ ಮತ್ತು ಆತ್ಮ ಸ್ಥೈರ್ಯ ಬರುತ್ತದೆ ಎಂಬುದಾಗಿ  ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವಮೂರ್ತಿ ಅವರ ಹೇಳಿದರು.

ತಾಲ್ಲೂಕಿನ ಹರಿಯಬ್ಬೆ ಗ್ರಾಮದಲ್ಲಿ  ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ   ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗುಣಮಟ್ಟದ ಹಾಲು ಖರೀದಿ ಮಾಡುವ ಮೂಲಕ ಎಲ್ಲೆಲ್ಲಿ ಸೋರಿ ಹೋಗುತ್ತಿತ್ತು. ಅದನ್ನು ತಡೆಯುವ ಮೂಲಕ 2025ಮಾರ್ಚ್ ನಷ್ಟವೆಲ್ಲ ಕಳೆದು ಸುಮಾರು 11ಕೋಟಿ 41ಲಕ್ಷ ರೂಪಾಯಿ ಒಕ್ಕೂಟ ಲಾಭಾಂಶದಲ್ಲಿದೆ. ಈ ಲಾಭಾಂಶವನ್ನು ಸಂಘಗಳಿಗೆ ಹಾಲಿನ ಪ್ರಮಾಣ ಹಾಗೂ ಗುಣಮಟ್ಟದ ಮೇಲೆ  ಬೋನಸ್ ಹಣವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂಬುದಾಗಿ ಅವರು   ಹೇಳಿದರು.

ಶಿಮುಲ್ ನಿರ್ದೇಶಕರಾದ  ಹೊಸದುರ್ಗದ ಬಿ.ಆರ್. ರವಿಕುಮಾರ್ ಮಾತನಾಡಿ ಈ ಹಿಂದೆ ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿ ಜೊತೆ ಶಿಮುಲ್ ಒಪ್ಪಂದವಿತ್ತು. ಈ ಕಂಪನಿಯವರು ರೈತರ ಹಸುಗಳಿಗೆ ಇನ್ಸೂರೆನ್ಸ್ ಮಾಡಿ 15 ದಿನಗೊಳಗಾಗಿ ಹಸುಗಳು ಮೃತಪಟ್ಟರೆ ವಿಮೆ ಹಣ ಪಾವತಿಸುತ್ತಿರಲಿಲ್ಲ. 

ಇದರಿಂದ ರೈತರಿಗೆ ಅನೇಕ ಸಮಸ್ಯೆ ಹಾಗೂ ನಷ್ಟ ಉಂಟಾಗುವುದನ್ನು ಗಮಿನಿಸಿದ ಶಿಮುಲ್ ಆಡಳಿತ ಮಂಡಳಿಯು ಅಗ್ರಿಇನ್ಸೂರೆನ್ಸ್ ಎಂಬ ಹೊಸವಿಮೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಸದರಿ ಇನ್ಸೂರೆನ್ಸ್ ಕಂಪನಿಯು ಹೊಸ ಹಸುಗಳಿಗೆ ವಿಮೆ ಮಾಡಿಸಿದ ದಿನದಿಂದಲೇ ಹಸುಗಳು ಮೃತಪಟ್ಟರೆ ವಿಮೆ ಹಣ ಪಾವತಿಸಲು ಸಿದ್ಧವಿರುತ್ತದೆ. ಎಂದರಲ್ಲದೆ,

ಒಕ್ಕೂಟದ ವತಿಯಿಂದ ಪಶುವೈದ್ಯಾಧಿಕಾರಿ ನೇಮಕ ಮಾಡಿದ್ದು ಉತ್ತಮ ಗುಣಮಟ್ಟದ ಚಿಕಿತ್ಸೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

ಶಿಮುಲ್ ನಿರ್ದೇಶಕರಾದ ಜಿ.ಪಿ.ರೇವಣಸಿದ್ದಪ್ಪ ಅವರು ಮಾತನಾಡಿ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಂಡ ನಂತರ ನೀರಾವರಿ ಸೌಲಭ್ಯ ಹೆಚ್ಚಾಗಲಿದೆ. ಇದರಿಂದ ಹೈನುಗಾರಿಕೆ ಹೆಚ್ಚಿಸಲು ಚಿತ್ರದುರ್ಗ ಮತ್ತು ದಾವಣಗೆರೆ ಎರಡು ಜಿಲ್ಲೆಗಳು ಸೇರಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಈಗಾಗಲೇ ಸುಮಾರು 300ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಮುಂದಿನ ಎರಡ್ಮೂರು ವರ್ಷಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂಬುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ  ಬ್ಯಾಡರಹಳ್ಳಿಯ ಇಬ್ಬರು, ಹರಿಯಬ್ಬೆ ಮತ್ತು ತವಂದಿಯ ಓರ್ವ ರೈತರ ಫಲಾನುಭವಿಗಳಿಗೆ ಮೃತಪಟ್ಟ ಹಸುಗಳಿಗೆ ಒಕ್ಕೂಟದಿಂದ ಪರಿಹಾರ ಚೆಕ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು  ನಡೆಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಿ.ಜೆ.ಹನುಮಂತರಾಯ ವಹಿಸಿದ್ದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ  ಜ್ಯೋತಿ, ಹೆಚ್.ಸಿ. ಬಸವರಾಜ್, ಹೆಚ್.ಸಿ.ಹನುಮಂತರಾಯ, ಜಿ.ಬಿ. ಎಂ.ಹೆಚ್. ಕರಿಯಣ್ಣ, ಸುರೇಶ್, ಜೆ.ಆರ್. ಪಾಟೇಲ್, ಈರಣ್ಣ, ಜನಾರ್ಧನ್, ವಿಸ್ತರಣಾಧಿಕಾರಿಗಳಾದ ಕೃಷ್ಣಕುಮಾರ್, ಜಿ.ರವಿಚಂದ್ರ, ಪಶುವೈದ್ಯಾಧಿಕಾರಿ ದೀರಾಜ್ ಪ್ರಕಾಶ್ ಜಿ,  ಪವನ್, ಗ್ರಾಮಪಂಚಾಯಿತಿ  ಮಾಜಿ ಅಧ್ಯಕ್ಷೆ ಶಶಿಕಲಾ, ಶ್ರೀನಿವಾಸ್, ಜಯರಾಮಪ್ಪ,  ಕಾರ್ಯದರ್ಶಿ ತಿಪ್ಪೇಸ್ವಾಮಿ,  ಕರಿಯಣ್ಣ, ಬಿ.ಜೆ. ಗೌಡ, ಹನುಮಂತರಾಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *