
ಹಿರಿಯೂರು:
ನಗರದ ನಾಗರೀಕರಿಗೆ ನೆರವಾಗುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಎಸ್.ಎಫ್.ಸಿ ಹಾಗೂ ನಗರಸಭಾ ನಿಧಿಯಡಿ ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹೇಳಿದರು.

ನಗರದ ನಗರಸಭೆ ಕಛೇರಿ ಆವರಣದಲ್ಲಿ 2019-20 ರಿಂದ 2025-26 ನೇ ಸಾಲಿನವರೆಗೆ ಎಸ್.ಎಫ್.ಸಿ ಹಾಗೂ ನಗರಸಭಾ ನಿಧಿಯಡಿ ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್, ವೃತ್ತಿನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲು ಸಹಾಯಧನ, ಪೌರಕಾರ್ಮಿಕರು ಸುರಕ್ಷಾಧಿರಿಸು, ದಿವ್ಯಾಂಗ ಚೇತನರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕನೆರವು, ಪರಿಶಿಷ್ಟ ಪಂಗಡದ ಜನಾಂಗದ ಬಿ.ಇ. ಮತ್ತು ಎಂ.ಬಿ.ಬಿ.ಎಸ್ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಖರೀದಿಸಲು ಸಹಾಯಧನ, ಪ.ಜಾತಿ/ಪ.ಪಂಗಡದ ಜನಾಂಗದವರಿಗೆ ನೀರಿನ ಸಂಪರ್ಕ ಕಲ್ಪಿಸಿ ಕೊಡಲು ಶುಲ್ಕ ಭರಿಸುವ ಸಹಾಯಧನ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ನಗರಸಭೆ ಪೌರಾಯುಕ್ತರಾದ ಎ.ವಾಸೀಂ, ನಗರಸಭೆ ಮಾಜಿ ಅಧ್ಯಕ್ಷರಾದ ಶಿವರಂಜಿನಿಯಾದವ್, ನಗರಸಭೆ ಮಾಜಿಉಪಾಧ್ಯಕ್ಷರಾದ ಅಂಬಿಕಾಆರಾಧ್ಯ, ನಗರಸಭೆ ನಗರಸಭೆ ಸದಸ್ಯರುಗಳು ಮತ್ತು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

