March 2, 2026
000003

ಹಿರಿಯೂರು:

ಪರಿಸರದ ಮೇಲಷ್ಟೇ ಅಲ್ಲದೆ ಪ್ರತಿ ಅಡುಗೆ ಮನೆಯಲ್ಲಿ ಹಾಗೂ ಆಹಾರ ಸರಪಳಿಯಲ್ಲಿ ಪ್ಲಾಸ್ಟಿಕ್ ನುಸುಳುತ್ತಿದೆ. ಈ ಪ್ಲಾಸ್ಟಿಕ್ ಮಾನವ ದೇಹದ ರಕ್ತ, ಶ್ವಾಸಕೋಶ, ಮೆದುಳು ಹಾಗೂ ಕೂದಲುಗಳನ್ನು ಸಹ ಪತ್ತೆಯಾಗಿದೆ, ನಾವು ಸೇವಿಸುವ ಹಾಲು, ಮೀನು, ಉಪ್ಪು, ಸಕ್ಕರೆ ಇತ್ಯಾದಿ ದಿನಬಳಕೆ ವಸ್ತುಗಳಲ್ಲಿಯೂ ಪ್ಲಾಸ್ಟಿಕ್ ಇದೆ, ಇದನ್ನು ಹೀಗೆ ಬಿಟ್ಟರೆ ಮನುಷ್ಯ ಭೂಮಿಯ ಮೇಲೆ ನಾಶವಾಗುವ ದಿನ ದೂರವಿಲ್ಲ ಎಂಬುದಾಗಿ  ಕಸವನಹಳ್ಳಿ ರಮೇಶ್  ಅವರು ಹೇಳಿದರು.

ತಾಲ್ಲೂಕಿನ ಜೆ.ಜೆ.ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಪ್ಲಾಸ್ಟಿಕ್ ಒಪ್ಪಂದ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಅವರು  ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ್ ಕಳ್ಳಿಹಟ್ಟಿ  ಅವರು ಮಾತನಾಡಿ ಮಾನವ ಅಭಿವೃದ್ಧಿಯ ಹೆಸರಿನಲ್ಲಿ ಅವಾಂತಕಾರಿ ಚಿಂತನೆಗಳನ್ನು ಮಾಡುತ್ತಾ ಜೀವನ ಚಿಕ್ಕದಾಗುತ್ತಾ ಹೋಗುತ್ತಿವೆ. ಪರಿಸರದ ಮೇಲೆ ದೌರ್ಜನ್ಯಗಳು ಹೀಗೆ ಮುಂದುವರೆದರೆ ಪರಿಸರವೇ ನಮ್ಮ ಮೇಲೆ ಮುಗಿ ಬೀಳಲಿದೆ ಎಂಬುದಾಗಿ ಅವರು  ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲರಾದ ಶಿವಣ್ಣನವರು ಮಾತನಾಡಿ, ಮಕ್ಕಳಿಗೆ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾಡುವುದಕ್ಕಿಂತ ಜೀವನದ ಮೌಲ್ಯಗಳ ಬಗ್ಗೆ ಕೌಶಲ್ಯದ ಬಗ್ಗೆ ತಿಳಿಸಿಕೊಡುವ ಇಂತಹ ಕಾರ್ಯಗಾರಗಳು ಅಭಿಯಾನಗಳು ಹೆಚ್ಚು ಪರಿಣಾಮಕಾರಿ ಎಂಬುದಾಗಿ ಅವರು ಹೇಳಿದರು.

ಪರಿಸರವಾದಿ ಡಾ.ಹೆಚ್.ಕೆ.ಸ್ವಾಮಿ ಮಾತನಾಡಿ, ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿ ಬೆಳೆಸಬೇಕು, ಬರೀ ವಿದ್ಯೆಯನ್ನು ತುಂಬಿದರೆ ಉಪಯೋಗವಿಲ್ಲ ಎಂದು ತ್ಯಾಜ್ಯ ವಸ್ತುಗಳಿಂದ ಮರುಬಳಕೆ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿದರು. ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಮಾಳಿಗೆ ಮಾತನಾಡಿ ಮಕ್ಕಳಲ್ಲಿ ದೈಹಿಕ ಕ್ಷಮತೆ ಕಡಿಮೆಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಮರ-ಗಿಡ ಬೆಳೆಸಿ ಪರಿಸರ ಉಳಿಸಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಎಂಬುದಾಗಿ ಘೋಷವಾಕ್ಯಗಳನ್ನು ಹೇಳಿಕೊಡಲಾಯಿತು. ಈ ಕಾರ್ಯಕ್ರಮವನ್ನು  ನಿರ್ವಹಣೆ ಮಾಡಿದ ವಿಜ್ಞಾನ ಶಿಕ್ಷಕ ರಂಗನಾಥ್ ಕಾರ್ಯಕ್ರಮವನ್ನು ಆಚ್ಚುಕಟ್ಟಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸಹಶಿಕ್ಷಕರಾದ ಜಗದಾಂಬ ವಂದನಾರ್ಪಣೆ ಮಾಡಿದರು. ಸಹ ಶಿಕ್ಷಕರಾದ ಉಮಾದೇವಿ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *