
ಹಿರಿಯೂರು :
ಗ್ರಾಮಾಂತರ ಪೋಲೀಸ್ ಠಾಣೆಗೆ ಕರ್ತವ್ಯಕ್ಕೆ ಆಗಮಿಸಿರುವ ನೂತನ ಉಪನಿರೀಕ್ಷಕರಾದ ಹರಿಯಬ್ಬೆ ಕಾಂತರಾಜ್ ರವರು ದಕ್ಷ ಹಾಗೂ ಅತ್ಯಂತ ಜನಪರ ಕಾಳಜಿ ಹೊಂದಿರುವ ಪೋಲೀಸ್ ಅಧಿಕಾರಿಯಾಗಿದ್ದು, ಇವರ ಅವಧಿಯಲ್ಲಿ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಯಾಗಲಿ, ಇವರ ಕರ್ತವ್ಯನಿಷ್ಠೆ ಜನಮೆಚ್ಚುಗೆಗೆ ಪಾತ್ರವಾಗಲಿ ಎಂಬುದಾಗಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಶುಭಹಾರೈಸಿದರು.

ನಗರದ ಗ್ರಾಮಾಂತರ ಪೋಲೀಸ್ ಠಾಣೆಗೆ ನೂತನ ಉಪನಿರೀಕ್ಷಕರಾಗಿ ಆಗಮಿಸಿರುವ ಕಾಂತರಾಜ್ ಹರಿಯಬ್ಬೆ ಇವರಿಗೆ ಶಾಲು ಹೊದಿಸಿ, ಪುಷ್ಪಮಾಲೆಹಾಕಿ, ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ, ಸ್ವಾಗತ ಕೋರಿ, ನಂತರ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ “ಹಿರಿಯೂರುನ್ಯೂಸ್” ತಂಡದ ಹಿರಿಯ ಪತ್ರಕರ್ತರುಗಳಾದ ಗೋಸಿಕೆರೆರಂಗನಾಥ್, ಪಿ.ಆರ್.ಸತೀಶ್ ಬಾಬು, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಇನಾಯತ್ ವುಲ್ಲಾ, ಇರ್ಫಾನ್ ವುಲ್ಲಾ ಹಾಗೂ ಯಾದವ ಸಮಾಜದ ಮುಖಂಡರುಗಳಾದ ವಿಜಯ್ ಯಾದವ್, ಸ್ಟುಡಿಯೋಗೋವಿಂದರಾಜು, ದಾಸೇಗೌಡ, ಇವರುಗಳು ಸೇರಿದಂತೆ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

