

ಹಿರಿಯೂರು :
ತಾಲ್ಲೂಕಿನ ಶ್ರೀಕ್ಷೇತ್ರನಂದಿಹಳ್ಳಿ ಶ್ರೀರಂಗನಾಥಸ್ವಾಮಿ ಅಂಬಿನೋತ್ಸವ ಅಕ್ಟೋಬರ್ 2ರ ಗುರುವಾರದಂದು ವಿಜೃಂಭಣೆಯಿಂದ ನಡೆಯಲಿದೆ ಎಂಬುದಾಗಿ ಶ್ರೀರಂಗನಾಥಸ್ವಾಮಿ ದೇವಸ್ಥಾನ ಸಮಿತಿಯ ವ್ಯವಸ್ಥಾಪಕರಾದ ಪಟ್ಟದ ಪೂಜಾರಿ ಓದೋರಂಗಪ್ಪ ಅವರು ಮಾಧ್ಯಗಳಿಗೆ ತಿಳಿಸಿದೆ.
ಸೆಪ್ಟಂಬರ್ 29ರಸೋಮವಾರ ಸಾಯಂಕಾಲ ಶ್ರೀರಂಗನಾಥಸ್ವಾಮಿ ಸಾಯಂಕಾಲ ಪಟ್ಟದಪೂಜೆ, ಸೆಪ್ಟಂಬರ್ 30ರ ಮಂಗಳವಾರ ಸಾಯಂಕಾಲ ಪಟ್ಟದ ಪೂಜೆ, ಅಕ್ಟೋಬರ್ 1ರ ಬುಧವಾರ ಸಾಯಂಕಾಲ ಶ್ರೀರಂಗನಾಥಸ್ವಾಮಿ ಆಯುಧ ಪೂಜೆ, ಅಕ್ಟೋಬರ್ 4ರ ಶನಿವಾರ ಹರಿಸೇವೆ ಅಥವಾ ಅನ್ನಸಂತರ್ಪಣೆ ನಡೆಯಲಿದೆ. ಎಂದರಲ್ಲದೆ,

ಅಕ್ಟೋಬರ್ 5ರಭಾನುವಾರದಿಂದ ಅಕ್ಟೋಬರ್ 9ರ ಗುರುವಾರದವರೆಗೆ ಪ್ರತಿದಿನ ಸಾಯಂಕಾಲ ಪೂಜಾ ಕಾರ್ಯಕ್ರಮದ ನಂತರ ಮಂಡೆಕಾರ್ಯಕ್ರಮ, ಅಕ್ಟೋಬರ್ 10ರ ಶುಕ್ರವಾರ ಉತ್ಸವ ಮೂರ್ತಿಯನ್ನು ಯಾದವರಹಟ್ಟಿಗೆ ಬಿಜಯಂಗೈಯುವುದು. ಅಕ್ಟೋಬರ್ 11ರ ಶನಿವಾರ ರಾತ್ರಿ ನಾಗರಪೂಜೆ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ ಎಂಬುದಾಗಿ ಅವರು ಹೇಳಿದರು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು-ಮನ-ಧನ ಹುಂಡಿಯಲ್ಲಿ ಹಾಕತಕ್ಕದ್ದು ಮತ್ತು ಒಡವೆ ವಸ್ತುಗಳನ್ನು ಕೊಟ್ಟವರು ಅಧಿಕೃತ ರಸೀದಿಯನ್ನು ಪಡೆಯಬೇಕು ಎಂಬುದಾಗಿ ಅವರು ಹೇಳಿದರು.

ಗುಡಿಕಟ್ಟಿಗೆ ಸೇರಿದ ಅಣ್ಣ-ತಮ್ಮಂದಿರು, ಭಕ್ತಾದಿಗಳು, ಹಾಗೂ ಗ್ರಾಮಸ್ಥರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂಬುದಾಗಿ ಶ್ರೀರಂಗನಾಥಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಮನವಿ ಮಾಡಿದ್ದಾರೆ.