
ಹಿರಿಯೂರು:
ಮರಾಠ ಸಾಮ್ರಾಜ್ಯದ ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರು ಈ ದೇಶ ಕಂಡಂತಹ ಮಹಾನ್ ನಾಯಕರುಗಳಲ್ಲಿ ಒಬ್ಬರಾಗಿದ್ದು, ಶಿವಾಜಿ ಮಹಾರಾಜರ ಧೈರ್ಯ, ಸಾಹಸ, ದೇಶಭಕ್ತಿ ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತ್, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀಛತ್ರಪತಿಶಿವಾಜಿಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಅವರು ಮಾತನಾಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಆರ್.ರಂಗಸ್ವಾಮಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಇತಿಹಾಸದಲ್ಲಿ ಮರಾಠ ಸಾಮ್ರಾಜ್ಯದ ಸ್ಥಾಪಕ ಮತ್ತು ಶ್ರೇಷ್ಠ ಯೋಧರಾಗಿದ್ದಾರೆ, ಪುಣೆಯ ಶಿವನೇರಿ ಕೋಟೆಯಲ್ಲಿ ಜನಿಸಿದ ಇವರು ಗೆರಿಲ್ಲಾ ಯುದ್ಧ ತಂತ್ರ ಬಳಸಿ, ಮೊಘಲರು ಮತ್ತು ಆದಿಲ್ ಶಾಹಿಗಳ ವಿರುದ್ಧ ಹೋರಾಡಿ ಸ್ವತಂತ್ರ್ಯ ಹಿಂದೂ ಸ್ವರಾಜ್ಯವನ್ನು ಸ್ಥಾಪಿಸಿದ ಮಹಾನ್ ನಾಯಕ ಎಂಬುದಾಗಿ

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ತಹಶೀಲ್ದಾರರಾದ ಸಿದ್ದೇಶ್ ವಹಿಸಿದ್ದರು. ಸರ್ಕಾರಿ ಪದವಿಪೂರ್ವ ಕಾಲೇಜಿನ ಆರ್.ರಂಗಸ್ವಾಮಿ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮರಾಠ ಸಮಾಜದ ಅಧ್ಯಕ್ಷರಾದ ನರಸಿಂಗರಾವ್ ಸಾಳಂಕೆ, ಉಪಾಧ್ಯಕ್ಷರಾದ ಕೃಷ್ಣರಾಜ್ ಜಾದವ್, ನಿರ್ದೇಶಕರಾದ ಸದಾಶಿವರಾವ್ ಚವ್ಹಾಣ್, ಮುಖಂಡರುಗಳಾದ ಕೆ.ಪರಶುರಾಮ್ ರಾವ್ ಬೋಸ್ಲೆ, ಕಾರ್ಯದರ್ಶಿ ಚಂದ್ರಕಾಂತ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಜಿ.ಹನುಮಂತರಾಯಪ್ಪ, ಆದಿವಾಲಗ್ರಾಮಪಂಚಾಯಿತಿ ಸದಸ್ಯರಾದ ಎ.ಚಂದ್ರಶೇಖರ,ವಿ.ವಿ.ಪುರ ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ಶಾಂತಕುಮಾರ್, ವಿ.ವಿ.ಪುರ ಹಾಲಿಗ್ರಾಮಪಂಚಾಯಿತಿ ಸದಸ್ಯರಾದ ಗೀತಾಬಾಯಿಪವಾರ್, ದೈಹಿಕ ಶಿಕ್ಷಣ ಅಧಿಕಾರಿಗಳಾದ ರವೀಂದ್ರನಾಯ್ಕ, ವಿ.ವಿ.ಪುರ ಮುಖಂಡರಾದ ಶಿವಕುಮಾರಶಿಂಧೆ, ತಾಲ್ಲೂಕು ಕಚೇರಿಯ ಶ್ರೀನಿವಾಸ್ ರೆಡ್ಡಿ, ಎಸ್.ಎನ್.ಮಂಜುನಾಥ್, ಬಿ.ಎಸ್.ಎಂ.ಇಲಾಖೆ ಶ್ರೀದೇವಿ ಸೇರಿದಂತೆ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

