March 2, 2026
2

ಹಿರಿಯೂರು:

ತಾಲ್ಲೂಕಿನ ಮಸ್ಕಲ್ ಟಿ.ಬಿ.ಗೊಲ್ಲರಹಟ್ಟಿ ಗ್ರಾಮದ ಕಾಡುಗೊಲ್ಲರ  ಆರಾಧ್ಯ ದೇವರುಗಳಾದ ಕರಡಿಗೊಲ್ಲರ ಬೆಡಗಿನಅಮವಾಸ್ಯೆ ಚಿತ್ರಲಿಂಗೇಶ್ವರಸ್ವಾಮಿ ಮತ್ತು ಅಜ್ಜೇರುಗೊಲ್ಲರ ಬೆಡಗಿನ ಶ್ರೀಈರಪ್ಪಸ್ವಾಮಿ ಹಾಗೂ ಶ್ರೀಗೊಲ್ಲಾಳಮ್ಮದೇವಿ, ಶ್ರೀರಂಗನಾಥಸ್ವಾಮಿ ಹಾಗೂ ಶ್ರೀವೀರಾಂಜನೇಯಸ್ವಾಮಿ ಕಾಳುಹಬ್ಬ ಫೆಬ್ರವರಿ 24ರಂದು ನಡೆಯಲಿದೆ.

ಫೆಬ್ರವರಿ 21ರಂದು ಜಾತ್ರೆ ಆರಂಭವಾಗಲಿದ್ದು,ಅಂದು ಬೆಳಗ್ಗೆ  ಧ್ವಜಾರೋಹಣ, ಭಾನುವಾರ ಹಾಲು ಮೀಸಲು, ಸೋಮವಾರ ಕುಡಲಸಂಗಮದಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಉತ್ಸವ ಮೂರ್ತಿ ಓಲಗ ಮತ್ತು ಕರಡಿಮೇಳದೊಂದಿಗೆ ತೋಪಿಗೆ ಸೇರುವುದು.

ಸಂಜೆವಾರದ ಪೂಜೆ, ಶಿಲಾಮೂರ್ತಿಯ ಪಾದಪೂಜೆ, ದೊಡ್ಡಪೂಜೆ, ಮೇಲ್ದೀಪ ಪೂಜೆ, ನೈವೇದ್ಯ, ಪಂಜಿನ ಸೇವೆ ಮುಗಿಸಿ ಬೆಳಗುವುದು, ಕಾಳು ತಿದ್ದುವುದು, ಹೂವಿನಹಾರ ಹರಾಜು ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಮರುದಿನ ದೇವರ ಮೆರವಣಿಗೆ, ಮಣೇವು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿಕೊಡಬೇಕು ಎಂಬುದಾಗಿ ದೇವಸ್ಥಾನ ಕಮಿಟಿಯವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *