March 2, 2026
00001

ಹಿರಿಯೂರು:

ನಗರದ ಸ್ವಚ್ಚತೆಗೆ  ಸಾರ್ವಜನಿಕರು ಪೌರಕಾರ್ಮಿಕರ  ಜೊತೆ ಕೈಜೋಡಿಸಿ ಪರಿಸರ ಕಾಪಾಡಿಕೊಳ್ಳುವುದರಿಂದ  ಆರೋಗ್ಯವಂತರಾಗಿರಲು ಸಾಧ್ಯ  ಎಂದು ಸಾಕಷ್ಟು ಬಾರಿ  ನಗರದ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂಬುದಾಗಿ ನರಸಭೆ ಪೌರಾಯುಕ್ತರಾದ ಎ.ವಾಸೀಂಅವರು ಹೇಳಿದರು.

ಮುಂಜಾನೆ ನಗರದ ಸ್ವಚ್ಚತೆಯ  ಸಂದರ್ಭದಲ್ಲಿ ಪ್ರಧಾನ ರಸ್ತೆಯ ಟಿ.ಎಸ್.ಟಿ.ಕಾಂಪ್ಲೆಕ್ಸ್  ಮುಂಭಾಗ ಕಿರಾಣಿ ಅಂಗಡಿ ಒಬ್ಬರು ಕಸದ ರಾಶಿಯನ್ನೇ ರಸ್ತೆ ಬದಿಯಲ್ಲಿ ಹಾಕಿರುವುದನ್ನು  ನೋಡಿದ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಹಾಗೂ ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಅಶೋಕ್, ಮಹಾಲಿಂಗಪ್ಪ ರಸ್ತೆಯಲ್ಲಿ ಹಾಕಿರುವ ಕಸದ ರಾಶಿಯನ್ನು  ಮತ್ತೆ ಆ ಕಸವನ್ನುಅದೇ ಅಂಗಡಿಯ ಮುಂದೆ ಹಾಕಿ ಎಚ್ಚರಿಸಿದರು.

ಪೌರಾಯುಕ್ತರಾದ ಎ.ವಾಸೀಂ ರವರು ಸ್ವಚ್ಚತೆಗೆ ಗಮನ ನೀಡಿದ ಕಿರಾಣಿ ಅಂಗಡಿ ಮಾಲಿಕರಿಗೆ ದಂಡ ಹಾಕುವಂತೆ ಆರೋಗ್ಯ ನಿರೀಕ್ಷಕರಿಗೆ ಹೇಳಿದರು. ಮತ್ತೆ ಇದೇ ರೀತಿ  ನಡೆದುಕೊಂಡರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಆರೋಗ್ಯ ನಿರೀಕ್ಷಕರು  ಎಚ್ಚರಿಕೆ ನೀಡಿದರು.

ಸಾರ್ವಜನಿಕರು ಪೌರಕಾರ್ಮಿಕರ ಜೊತೆ ಕೈಜೋಡಿಸಿ ನಗರದ ಸ್ವಚ್ಚತೆಗೆ ಸಹಕರಿಸಿ ಸಾರ್ವಜನಿಕರು ಕಸ ಹಾಕಿದ್ದು ಕಂಡು ಬಂದಲ್ಲಿ ನಗರಸಭೆ ವತಿಯಿಂದ ದಂಡ ವಿಧಿಸುವುದರ ಜೊತೆಗೆ ಕಸವನ್ನು ಮತ್ತೆ ಹಾಕಿದವರ ಮನೆಯ ಅಥವಾ ಅಂಗಡಿಯ ಮುಂದೆ ಹಾಕಲಾಗುವುದು. ಎಂದರಲ್ಲದೆ,

ಸ್ವಚ್ಚತೆಯನ್ನು ಸಾರ್ವಜನಿಕರೇ ಕಾಪಾಡದಿದ್ದರೆ ನಗರಸಭೆಯವರು ಎಷ್ಟು ಸ್ವಚ್ಚತೆ  ಮಾಡಲು ಸಾಧ್ಯ.ಘನ ತ್ಯಾಜ್ಯ ವಸ್ತುಗಳನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಿ ನಗರಸಭೆಯ ಟ್ರ್ಯಾಕ್ಟರ್ ಬಂದಾಗ ಕಸವನ್ನು ಅದರೊಳಗೆ ಹಾಕಿ ಬೇಕಾಬಿಟ್ಟಿ ರಸ್ತೆಯಲ್ಲಿ ಬಿಸಾಕುವುದು, ಚರಂಡಿಗೆ ಹಾಕುವುದು ಕಂಡುಬಂದಲ್ಲಿ ಕಸವನ್ನು ನೀವೇ ತೆಗೆದುಹಾಕಬೇಕಾಗುತ್ತದೆ ಎಂದು ನಗರಸಭೆಯ ವತಿಯಿಂದ ಮುನ್ನೆಚ್ಚರಿಕೆ ನೀಡಲಾಯಿತು.

About The Author

Leave a Reply

Your email address will not be published. Required fields are marked *