March 2, 2026
00004

ಹಿರಿಯೂರು:

ದಕ್ಷಿಣ ಭಾರತದ ಪ್ರಸಿದ್ಧ, ಮೂರು ರಾಜ್ಯಗಳ ಭಕ್ತ ಸಮೂಹವನ್ನು ಹೊಂದಿರುವ ಐತಿಹಾಸಿಕ ಹಿನ್ನಲೆಯುಳ್ಳ ಕರ್ನಾಟಕ ಗಡಿ ಭಾಗಕ್ಕೆ ಹೊಂದಿಕೊಂಡಿರುವ  ಆಂಧ್ರಪ್ರದೇಶದ  ಹೇಮಾವತಿಯ ಶ್ರೀಹೇಂಜೇರು  ಸಿದ್ಧೇಶ್ವರಸ್ವಾಮಿಯ ಜಾತ್ರೆ  ಮಹಾಶಿವರಾತ್ರಿ  ಅಂಗವಾಗಿ ಫೆಬ್ರವರಿ15 ರಿಂದ 22ರವರೆಗೆ ಅತ್ಯಂತ  ವಿಶಿಷ್ಟತೆಯಿಂದ ನಡೆಯಲಿದೆ.

ಅಖಾಂಡ ಪೂಜೆಯೊಂದಿಗೆ  ಆರಂಭವಾಗುವ ಶಿವರಾತ್ರಿ ಉತ್ಸವವು ಈಗಾಗಲೇ  ಕಳೆದ ಫೆಬ್ರವರಿ 15ರಿಂದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಫೆಬ್ರವರಿ 15ರಂದು ಮಹಾಶಿವರಾತ್ರಿ, ಫೆಬ್ರವರಿ 16ರಂದು ಭಾನುಪಲ್ಲಕ್ಕಿ ಉತ್ಸವ ನಡೆದಿದೆ.

ಫೆಬ್ರವರಿ 17 ರ  ಮಂಗಳವಾರವಾದ ಇಂದು  ಅಗ್ನಿಗುಂಡ ಮಹೋತ್ಸವ ಹಲವು  ಕಾರ್ಯಕ್ರಮಗಳು  ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ  ವಿಜೃಂಭಣೆಯಿಂದ ನೆರವೇರಿತು.

ಫೆಬ್ರವರಿ 18ರಂದು  ಬುಧವಾರ ಶಿಡಿಮಾನು ಉತ್ಸವ, ಫೆಬ್ರವರಿ19ರಂದು ಗುರುವಾರ ಚಿಕ್ಕರಥೋತ್ಸವ, ಫೆಬ್ರವರಿ20ರಂದು ಬ್ರಹ್ಮರಥೋತ್ಸವ, ಫೆಬ್ರವರಿ21ರಂದು ಶುಕ್ರವಾರ ವಸಂತೋತ್ಸವ, ಫೆಬ್ರವರಿ22ರಂದು ಶನಿವಾರ  ಶಯನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂಬುದಾಗಿ  ಶ್ರೀ ಕ್ಷೇತ್ರ ಹೇಮಾವತಿಯ  ಶ್ರೀ ಹೆಂಜೇರು ಸಿದ್ಧೇಶ್ವರಸ್ವಾಮಿ ದೇವಸ್ಥಾನ ಸಮಿತಿಯ  ಛೇರ್ಮನ್  ಕೆ.ಈರೇಗೌಡ, ಕಾರ್ದರ್ಶಿ ಇ.ಒ.ನರಸಿಂಹರಾಜು ಮಾಧ್ಯಮಗಳಿಗೆ ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *