
ಹಿರಿಯೂರು:
ತಾಲ್ಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯಿತಿಯ ಬ್ಯಾರಮಡು ಗ್ರಾಮಪಂಚಾಯಿತಿ ಸದಸ್ಯರ ಅವಧಿ ಕೊನೆಗೊಂಡಿದ್ದು ಗ್ರಾಮದ ಪ್ರತಿಯೊಂದು ಮನೆಗೆ ಸದಸ್ಯರಾದ ಚಂದ್ರುಬ್ಯಾರಮಡು ಅವರು ಭೇಟಿ ನೀಡಿ ಅವರೆಲ್ಲರಿಗೂ ಸಿಹಿಹಂಚಿ ಕೃತಜ್ಞತೆ ಸಲ್ಲಿಸಿದರು.
ಈ ಹಿಂದೆ ನಮ್ಮನ್ನು ಸದಸ್ಯರಾಗಿ ಆಯ್ಕೆ ಮಾಡಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಕ್ಕೆ ನಿಮ್ಮೆಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂಬುದಾಗಿ ಗ್ರಾಮದ ಮುಖಂಡರಿಗೂ ಯುವಕರಿಗೆ, ಮಹಿಳೆಯರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

