March 2, 2026
0003

ಹಿರಿಯೂರು:

ವಯೋಮಿತಿ ಇಲ್ಲದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಉತ್ತಮ ಆರೋಗ್ಯಕ್ಕೆ ದಾರಿ ಮಾಡಲಿದೆ. ಕ್ರೀಡೆಗಳು ನಮ್ಮ ದೇಹ  ಮತ್ತು  ಮನಸ್ಸನ್ನು ಸದೃಢವಾಗಿರಿಸಲು  ಸಹಾಯ ಮಾಡುತ್ತವೆ ಎಂಬುದಾಗಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ವೈ.ತಿಪ್ಪೇಸ್ವಾಮಿ ಅವರು ಹೇಳಿದರು.

ತಾಲ್ಲೂಕಿನ ಕಣಜನಹಳ್ಳಿಯಲ್ಲಿ ಕಣಜನಹಳ್ಳಿಯಲ್ಲಿ ಸ್ನೇಹಕೂಟ ಕ್ರಕೇಟರ್ಸ್ ವತಿಯಿಂದ ಕೆ.ಎಲ್.ಸತ್ಯಮೂರ್ತಿ, ಸತಿಶ್ ವಿ.ಹಾಗೂ ಕೆ.ಎ. ಶಿವಮೂರ್ತಿ ರವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ  ವೈ.ಟಿ.ಎಸ್.ಕಪ್ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಹೇಳಿದರು.

ತಿಪ್ಪೇಸ್ವಾಮಿ ಅವರು ಮಾತನಾಡಿ ಪ್ರತಿಯೊಬ್ಬರೂ ನಿತ್ಯ ಬದುಕಿನಲ್ಲಿ ಕ್ರೀಯಾಶೀಲವಾಗಿರಬೇಕಾದರೆ ವಯೋಮಿತಿ ಇಲ್ಲದೆ ಕ್ರೀಡೆಗಳಲ್ಲಿ  ಪಾಲ್ಗೊಳ್ಳಬೇಕು. ಆಗ ದೈಹಿಕ ಆರೋಗ್ಯ ಸುಧಾರಣೆ, ಮಾನಸಿಕ ಆರೋಗ್ಯ ಸುಧಾರಣೆ  ಆಗುವುದರ ಜೊತೆಯಲ್ಲಿ ಸ್ನೇಹ ಮತ್ತು ಸಾಮಾಜಿಕ ಸಂಬಂಧಗಳು ಬೆಳೆದು  ಬದುಕಿನಲ್ಲಿ  ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂಬುದಾಗಿ ಅವರು ಹೇಳಿದರು.

ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಅತಿಮುಖ್ಯವಾಗಿ ಒತ್ತಡ ಕಡಿಮೆಯಾಗುತ್ತದೆ. ಕ್ರೀಡೆಗಳು  ನಮ್ಮ ದೇಹವನ್ನು ಚುರುಕುಕಾಗಿರಿಸಲು ಸಹಾಯ ಮಾಡುತ್ತವೆ. ಕ್ರೀಡೆಗಳು ನಮ್ಮ ಸಾಮಾಜಿಕ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತವೆ.  ಹಾಗಾಗಿ ವಯೋಮಿತಿ ಇಲ್ಲದ ಕ್ರೀಡೆಗಳಲ್ಲಿ  ಪಾಲ್ಗೊಳ್ಳಿ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ  ರಾಜಣ್ಣ, ಪಾಂಡಪ್ಪ, ಡಿ.ಬಿ.ಬಸವರಾಜ್, ಬೀರಣ್ಣ,  ರವಿ.ಎಸ್.ಆರ್.ಎಲೆಕ್ಟ್ರಿಷಿನ್, ಪಿ.ಕೆ.ಶ್ರೀನಿವಾಸ್, ಶಿಕ್ಷಕರಾದ ರಘುನಾಥ್,  ಬಿ.ಎಪ್.ಟಿ.ರಂಗಸ್ವಾಮಿ, ಚಿಕ್ಕೆಂಚಪ್ಪ, ಶಿವರಾಜು, ಶಿವಮೂರ್ತಿ, ಈರಣ್ಣ, ಮಾಜಿ ಅಧ್ಯಕ್ಷೆ  ಮಂಜುಳಾ, ಜೋಗೇಶ್, ಇಂದ್ರಮ್ಮ,  ಮಂಜಣ್ಣ, ಬೋರ್ ವೆಲ್ ರಾಜಣ್ಣ,  ಧರ್ಮಪುರ ಹಾಗೂ ಕಣಜನಹಳ್ಳಿ ಗ್ರಾಮಸ್ಥರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *