
ಹಿರಿಯೂರು:
ಸಹಕಾರ ಕ್ಷೇತ್ರದಲ್ಲಿನ ಸಂಸ್ಥೆಗಳು ಬಲಗೊಂಡರೆ ರೈತರಿಗೆ ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪ ನಿರ್ಮಿಸಿರುವ 12 ನೂತನ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘಗಳು ಒಂದು ಕಾಲದಲ್ಲಿ ಆರ್ಥಿಕವಾಗಿ ಸಬಲವಾಗಿದ್ದವು. ಕೆಲ ದಶಕಗಳಿಂದ ಸಾಲ ನೀಡಿಕೆಯಲ್ಲಿನ ದೋಷ, ವಸೂಲಿಯಲ್ಲಿನ ನಿರ್ಲಕ್ಷ್ಯದ ಕಾರಣದಿಂದ ನಷ್ಟದ ಸುಳಿಗೆ ಸಿಲುಕಿದ್ದವು. ಎಂದರಲ್ಲದೆ,
ಈಚೆಗೆ ಸರ್ಕಾರದ ಯೋಜನೆಗಳನ್ನು ಇಂತಹ ಸಹಕಾರ ಸಂಘಗಳ ಮೂಲಕ ಜಾರಿಗೊಳಿಸುತ್ತಿರುವ ಕಾರಣ ಚೇತರಿಕೆ ಹಾದಿಯಲ್ಲಿವೆ.ಈ ಸಂಸ್ಥೆ 12 ನೂತನ ಮಳಿಗೆಗಳನ್ನು ನಿರ್ಮಿಸಿದ್ದು, ಇಂದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬಹುದು ಎಂಬುದಾಗಿ ಅವರು ಹೇಳಿದರು.

ಸಂಘದ ಅಧ್ಯಕ್ಷರಾದ ಎಸ್.ಜೆ.ಹನುಮಂತರಾಯ ಅವರು ಮಾತನಾಡಿ ಬೆಂಗಳೂರಿನ ರಾಜ್ಯ ಸಹಕಾರ ಮಾರಾಟ ಮಂಡಳದವರು ನೀಡಿದ 65ಲಕ್ಷ ರೂಗಳ ಅನುದಾನದಲ್ಲಿ 12 ಮಳಿಗೆಗಳನ್ನು ನಿರ್ಮಿಸಿದ್ದು, ಶೀಘ್ರದಲ್ಲಿಯೇ 50ಲಕ್ಷ ವೆಚ್ಚದಲ್ಲಿ ಮೊದಲ ಮಹಡಿ ನಿರ್ಮಿಸುತ್ತೇವೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾರಾಟ ಮಂಡಳದ ಉಪಾಧ್ಯಕ್ಷರಾದ ಶಿವಕುಮಾರಗೌಡಪಾಟೀಲ್, ನಿರ್ದೇಶಕರಾದ ಹೊಸಕೋಟೆಸುರೇಶ್, ಶಿಕಾರಿಪುರದ ಅಗಡಿಅಶೋಕ್, ವಿಜಯಪುರದ ಭೀಮರಾಯ ಗುಡದ್, ಹೊನ್ನಾಳಿ ಶಾಸಕ ಡಿ.ಜ.ಶಾಂತಗೌಡ, ಜೆ.ಡಿ.ಎಸ್. ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಮಂಜುನಾಥ್, ಟಿ.ಎ.ಪಿ.ಸಿ.ಎಂ.ಎಸ್.ಉಪಾಧ್ಯಕ್ಷೆ ಶ್ರೀಮತಿ ಅನಿತಾಮಹೇಶ್, ನಿರ್ದೇಶಕರಾದ ಎನ್.ಆರ್.ಲಕ್ಷ್ಮೀಕಾಂತ್, ವಿ.ವೀರಣ್ಣ, ಟಿ.ಗಿರಿಸ್ವಾಮಿ, ವಿ.ರಾಮಚಂದ್ರಪ್ಪ, ಎಸ್.ದೇವರಾಜು, ಆರ್.ಶ್ರೀಧರ, ಭಾಗ್ಯಮ್ಮಹನುಮಂತರಾಯಪ್ಪ, ಕಾರ್ಯದರ್ಶಿ ಗುರುಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈರಲಿಂಗೇಗೌಡ, ಖಾದಿರಮೇಶ್, ಎಂ.ಯು.ಶಿವರಾಂ, ಎಸ್.ಎಸ್.ರಂಗಪ್ಪ, ದಿಂಡಾವರ ಮಹೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

