
ಹಿರಿಯೂರು:
ತಾಲ್ಲೂಕಿನ ಐಮಂಗಲ ಜವನಗೊಂಡನಹಳ್ಳಿ ಹೋಬಳಿಯ ಎಲ್ಲಾ ಕೆರೆಗಳಿಗೂ ಕಾಮಗಾರಿಯನ್ನು ಬೇಗ ಮುಗಿಸಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ವತಿಯಂದ ಹಿರಿಯೂರಿನಿಂದ ಚಿತ್ರದುರ್ಗ ಜಿಲ್ಲಾ ಕಚೇರಿಯವೆರೆಗೂ ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಹಿರಿಯೂರಿನ ಪ್ರಧಾನ ರಸ್ತೆ ಮೂಲಕ ಪಾದಯಾತ್ರೆ ಮೆರವಣಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಹಾಗೂ ಚರ್ಚ್ ರಸ್ತೆ ಮೂಲಕ ಹುಳಿಯಾರು ರಸ್ತೆ ನೇರವಾಗಿ ರೈತರ ಪಾದಯಾತ್ರೆ ಚಿತ್ರದುರ್ಗದ ಕಡೆ ಹೊರಟಿತು.
ರೈತರು ಘೋಷಣೆಗಳನ್ನು ಕೂಗುತ್ತಾ ನೀರಿಗಾಗಿ ನಮ್ಮ ಪ್ರಾಣವನ್ನು ಬಿಟ್ಟೇವು. ನೀರು ಕೊಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಧ್ವನಿ ರೈತರ ಕೂಗು ಕೇಳುತ್ತಿತ್ತು. ರೈತರ ಕೂಗು ಸರ್ಕಾರಕ್ಕೆ ಏಕೆ ಕೇಳುತ್ತಿಲ್ಲ. ರೈತರ ಬಗ್ಗೆ ಹಗುರವಾಗಿ ನೋಡಿಕೊಳ್ಳುತ್ತಿರುವ ಸರ್ಕಾರಗಳು, ಜನಪ್ರತಿನಿಧಿಗಳು, ರೈತರ ಕಷ್ಟಕ್ಕೆ ಸ್ಪಂದಿಸದ ಇಂತಹ ಜನಪ್ರತಿನಿಧಿಗಳಿಗೆ ರೈತರ ಶಾಪ ಖಂಡಿತ ಬಿಡುವುದಿಲ್ಲೆಂದು ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಪಾದಯಾತ್ರೆ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ಗುಯಿಲಾಳು ಟೋಲ್ ಬಳಿ ಊಟ ಮಾಡಿ ನಂತರ ಪಾದಯಾತ್ರೆ ಐಮಂಗಲ ಮಾರ್ಗವಾಗಿ ಪಂಪಹೌಸ್ ಬಳಿ ತೋಟದಲ್ಲಿ ರಾತ್ರಿ ವಿರಾಮ ಬೆಳಿಗ್ಗೆ 7ಗಂಟೆಗೆ ತಿಂಡಿ ಮುಗಿಸಿ ಪಾದಯಾತ್ರೆ ಜಿಲ್ಲಾಧಿಕಾರಿಗಳ ಕಚೇರಿ ತಲಪುವುದು ಎಂಬುದಾಗಿ ಕರ್ನಾಟಕ ರಾಜ್ಯ ರೈತ ಸಂಘ ,ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಹೇಳಿದರು.
ಈ ಪಾದಯಾತ್ರೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷರಾದ ವೆಂಕಟೆಶ್, ಗೌರವಾಧ್ಯಕ್ಷರಾದ ಆಲೂರುಸಿದ್ಧರಾಮಣ್ಣ, ತಾಲ್ಲೂಕು ಪಂಚಾಯಿತಿ ಮಾಜ ಸದಸ್ಯರಾದ ಯಶವಂತಕುಮಾರ್, ಕೆ.ಟಿ.ರುದ್ರಮುನಿ, ಹನುಮಂತರೆಡ್ಡಿ, ತಿಮ್ಮರೆಡ್ಡಿ, ಅರಳಿಕೆರೆತಿಪ್ಪೇಸ್ವಾಮಿ, ಬಿ.ಜೆ.ಪಿ.ಮುಖಂಡರಾದ ಎನ್.ಆರ್.ಲಕ್ಷ್ಮೀಕಾಂತ್, ತಾಲ್ಲೂಕು ಬಿ.ಜೆ.ಪಿ.ಅಧ್ಯಕ್ಷರಾದ ಕೆ.ಅಭಿನಂದನ್, ಜೆ.ಡಿ.ಎಸ್.ಮುಖಂಡರಾದ ರವೀಂದ್ರಪ್ಪ, ಜಿಲ್ಲಾಧ್ಯಕ್ಷರಾದ ಕೆ.ಮಂಜುನಾಥ್, ತಾಲ್ಲೂಕು ಅಧ್ಯಕ್ಷರಾದ ಹನುಮಂತರಾಯಪ್ಪ, ತಾಲ್ಲೂಕಿನ ರೈತ ಬಾಂಧವರು, ಹಲವು ಜನಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

