
ಹಿರಿಯೂರು :
ಇಂದು ಹಿರಿಯೂರಿನಿಂದ ಚಿತ್ರದುರ್ಗದ ವರೆಗೆ ರೈತರ ಪಾದಯಾತ್ರೆಯ ಮಾರ್ಗದ ಮಧ್ಯೆ ಗುಹಿಲಾಳ ಗ್ರಾಮದಲ್ಲಿ ಊಟದ ಸಮಯದಲ್ಲಿ ಬಿಜೆಪಿ ಮುಖಂಡರಾದ ಎನ್.ಆರ್.ಲಕ್ಷ್ಮಿಕಾಂತ್ ಭೇಟಿ ನೀಡಿ ರೈತರೊಂದಿಗೆ ಚರ್ಚೆ ನಡೆಸಿದರು.

ಇಂದು ರಾತ್ರಿ ಬುರುಜನರೊಪ್ಪ ಗ್ರಾಮದಲ್ಲಿ ಎನ್.ಆರ್.ಲಕ್ಷ್ಮಿಕಾಂತ್ ರವರ ಅತಿಥಿಗೃಹದಲ್ಲಿ ರೈತರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ರೈತರ ಸಂಪೂರ್ಣ ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗಿದ್ದು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂಬುದಾಗಿ ಬಿಜೆಪಿ ಮುಖಂಡರಾದ ಸನ್ಮಾನ್ಯ ಎನ್.ಆರ್.ಲಕ್ಷ್ಮೀಕಾಂತ್ ರೈತಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.
