March 2, 2026
003

ಹಿರಿಯೂರು :

ತಾಲೂಕಿನ ಗೂಳ್ಯ ಗ್ರಾಮದ ಜಿ.ಡಿ.ಹನುಮಂತರಾಯ ಅವರ ಮನೆ ಆವರಣದಲ್ಲಿ  ಬುಧವಾರ ಮಧ್ಯಾಹ್ನ ಒಂದುವರೆ ಗಂಟೆ ಸುಮಾರಿನಲ್ಲಿ  ಸಿಡಿಮದ್ದು  ಕಚ್ಚಿ ಅವರ ಸಾಕು ನಾಯಿಯೊಂದು ಸಾವನಪ್ಪಿದ ಘಟನೆ ಜರುಗಿದೆ.

ಸ್ಪೋಟದ ಭಾರಿ ಸದ್ದಿಗೆ ನಾಯಿಯ ತಲೆ,ಬಾಯಿ ಚಿದ್ರ, ಛಿದ್ರಗೊಂಡು  ನಾಯಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.ಇಲ್ಲಿ ಯಾರೋ ನಮಗಾಗದ ವಿರೋಧಿ  ಕಿಡಿಗೇಡಿಗಳು ನನ್ನನ್ನೇ ಗುರಿಯಾಗಿರಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂಬುದಾಗಿ ಜಿ.ಡಿ.ಹನುಮಂತರಾಯ ಸಂಶಯ ವ್ಯಕ್ತಪಡಿಸಿದ್ದಾರೆ.

ಇದು ಗ್ರಾಮದ ಸಾರ್ವಜನಿಕರನ್ನು ಕೂಡ ಆತಂಕಕ್ಕೀಡುಮಾಡಿದ್ದು, ಗ್ರಾಮದ ಜನರು ಭಯಬೀತರಾಗಿದ್ದಾರೆ. ಈ ಬಗ್ಗೆ ಅಬ್ಬಿನ ಹೊಳೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ಕೊಡ ದಾಖಲಾಗಿದೆ.

ಈ ಬಗ್ಗೆ ಪೊಲೀಸರು ಕೂಡ ಕೂಲಂಕುಶ ತನಿಖೆ ನಡೆಸಿ ನಾಯಿ ಪ್ರಾಣ ಹತ್ಯೆ ಗೆ ಕಾರಣರಾದವರಿಗೆ ಕಾನೂನು ರೀತಿಯ ಸೂಕ್ತ ಶಿಕ್ಷೆಯನ್ನು ಕೊಡಿಸಬೇಕೆಂದು ಜಿ.ಡಿ.ಹನುಮಂತರಾಯರವರು ಮನವಿ ಮಾಡಿದ್ದಾರೆ.

ಈ ಬಗ್ಗೆ ಹಿರಿಯೂರು ಐಮಂಗಳ ವೃತ್ತ ಸಿಪಿಐ ಗುಡ್ಡಪ್ಪ ಹಾಗೂ ಅಬ್ಬಿನ ಹೊಳೆ ಪೊಲೀಸರು, ಪಶು ವೈದ್ಯಕೀಯ ಇಲಾಖೆಯ ವೈದ್ಯಾಧಿಕಾರಿಗಳ ತಂಡ  ಸ್ಥಳಕ್ಕೆ ಭೇಟಿ ನೀಡಿ ಚಿದ್ರಗೊಂಡ ನಾಯಿಯನ್ನು ಮರಣೋತ್ತರ ಪರೀಕ್ಷೆ ನಡೆಸಿ, ಈಗಾಗಲೇ ಹೆಚ್ಚಿನ ತನಿಖೆಗೆ ಸಹಕರಿಸಿದ್ದಾರೆ ಎಂಬುದಾಗಿ ನಾಯಿ ಮಾಲೀಕ ಹನುಮಂತರಾಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *