March 2, 2026
02

ಹಿರಿಯೂರು:

ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಸೆಪ್ಟಂಬರ್ 22ರಿಂದ 24ರವರೆಗೆ ರಾಜ್ಯ ವಲಯ ಕೃಷಿ  ಆಯುಕ್ತಾಲಯ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಆಸಕ್ತ ರೈತರಿಗೆ ಆಯುರ್ವೇದ ದಿನಾಚರಣೆಯ ಅಂಗವಾಗಿ ರೈತರಿಗೆ ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳು ಹಾಗೂ ಔಷಧೀಯ ಸಸ್ಯಗಳು ಕುರಿತು 3ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಆರ್.ರಜನೀಕಾಂತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ತರಬೇತಿಯ ಮೊದಲನೇ ದಿನ ಸೆಪ್ಟಂಬರ್ 22ರಂದು ಬೆಳಗ್ಗೆ 10ಗಂಟೆಗೆ ಚಿತ್ರದುರ್ಗ ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು ವಾಣಿಜ್ಯ ಬೆಳೆಯಾಗಿ ಔಷಧೀಯ ಸಸ್ಯಗಳು  ಮತ್ತು ಅವುಗಳ ಉಪಯೋಗಗಳು ಹಾಗೂ ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ವಿಷಯದ ಕುರಿತು ಮಾಹಿತಿ ನೀಡುವರು.

ನಂತರ ಮೆಮಬೂಬ್ ಅವರು ಚಿತ್ರದುರ್ಗ ಜಿಲ್ಲೆಯ ಹವಾಗುಣಕ್ಕೆ ಪೂರಕವಾದ ಔಷಧೀಯ ಸಸ್ಯಗಳ ಕುರಿತು, ನೋರಾ ಅಗ್ರೋಟೆಕ್ ಮದಕರಿಪುರದ ಗಿರೀಶ್ ಎಂ.ಡಿ.ಇವರು ವಿವಿಧ ಔಷಧೀಯ ಸಸ್ಯಗಳ ಒಪ್ಪಂದ ಕೃಷಿ, ಅವುಗಳ ಮಾರುಕಟ್ಟೆ ಮತ್ತು ಸಂಸ್ಕರಣೆ ಕುರಿತು  ವಿಷಯ ಮಂಡನೆ ಮಾಡುವರು.

ಸೆಪ್ಟಂಬರ್ 23ರಂದು ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿಯ ಡಾ.ಅಶೋಕ್ಪಿ.ಪ್ರಾಧ್ಯಾಪಕರು(ಬೇಸಾಯಶಾಸ್ತ್ರ) ಇವರು ಸಿರಿಧಾನ್ಯಗಳ ಬೇಸಾಯ ಕ್ರಮಗಳ ಕುರಿತು ಮಾಹಿತಿ ನೀಡುವರು.

ಮರಡಿದೇವಿಗೆರೆಯ ಸಾಂಪ್ರದಾಯಿಕ ಆಹಾರ ತಜ್ಞರಾದ ಡಾ.ಈಶ್ವರನ್ ಪಿ.ತೀರ್ಥ ಇವರು ವಿವಿಧ ಆರೋಗ್ಯಕರ ಸಿರಿಧಾನ್ಯಗಳ ಮವಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಮತ್ತು  ಹಿರಿಯೂರಿನ ಡಾ.ಸರಸ್ವತಿ(ಗೃಹವಿಜ್ಞಾನ) ಇವರು ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಪಾತ್ರ ಕುರಿತು ವಿಷಯ ಮಂಡನೆ ಮಾಡುವರು.

ನಂತರ ಪರಿಸರಿ ನ್ಯಾಚುರಲ್ಸ್ ಲಕ್ಕಿ ಹಳ್ಳಿಯ ಲೋಕೇಶ್ ಇವರು ಸಿರಿಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯ ವರ್ಧನೆ ಕುರಿತು ರೈತರಿಗೆ ಮಾಹಿತಿ ನೀಡುವರು.ತರಬೇತಿಯ 3 ನೇ ದಿನ ಸೆಪ್ಟಂಬರ್ 24ರಂದು ಔಷಧೀಯ ಸಸ್ಯಗಳನ್ನು ಬೆಳೆದ ಪ್ರಗತಿಪರ ರೈತರ ತಾಕು,ಪರಿಸರಿ ನ್ಯಾಚುರಲ್ಸ್, ಲಕ್ಕಿಹಳ್ಳಿ ಸಿರಿಧಾನ್ಯ ಸಂಸ್ಕರಣೆ ಕೇಂದ್ರ ಮತ್ತು ನೋರಾ ಅಗ್ರೋಮೆಟಿಕ್ ಮದಕರಿಪುರದ ಔಷಧೀಯ ಸಸ್ಯಗಳ ಸಂಸ್ಕರಣೆ ಕೇಂದ್ರಕ್ಕೆ ರೈತರನ್ನು ಕರೆದುಕೊಂಡು ಹೋಗಲಾಗುವುದು.

ಆದ್ದರಿಂದ ಆಸಕ್ತ 50 ಜನ ರೈತಬಾಂಧವರು ಈ ತರಬೇತಿಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ 8277931058 ಗೆ ಕರೆ ಮಾಡಿ, ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳುವ ಮೂಲಕ ಈ ತರಬೇತಿಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬುದಾಗಿ ಅವರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *