March 2, 2026
02

ಹಿರಿಯೂರು :

ಸುಮಾರು 180 ಜನ ಕುಂಚಿಟಿಗರು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ತಮಿಳುನಾಡಿನಲ್ಲಿರುವ ಕುಂಚಿಟಿಗರ ಕುಲ ದೇಗುಲ ದರ್ಶನಕ್ಕಾಗಿ ಪ್ರವಾಸ ಹೊರಟಿದ್ದು, ಅಲ್ಲಿಯ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರ ಕೃಷಿ ಶಿಕ್ಷಣ ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡಲಾಗುವುದು ಎಂಬುದಾಗಿ ತಾಲ್ಲೂಕು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಮಂಜುನಾಥ ಕಾತ್ರಿಕೇನಹಳ್ಳಿ ಹೇಳಿದರು.

ನಗರದ ಸಂಘದ ಕಚೇರಿಯಲ್ಲಿ ಕುಂಚಿಟಿಗ ಸಮುದಾಯದವರಿಗೆ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.

ಹಾಗೆಯೇ ಈ ಪ್ರವಾಸದಲ್ಲಿ ಕುಂಚಿಟಿಗ ಗಂಡು ಮಕ್ಕಳಿಗೆ ವಧು-ವರರ ಸಮಾವೇಶ ನಡೆಸುವ ಕುರಿತಂತೆ ಚರ್ಚೆಯನ್ನು ಸಹ ನಡೆಸಲಾಗುವುದು. ಇದರ ಬಗ್ಗೆ ಕುಂಚಿಟಿಗರ ಸಮುದಾಯದ ಮುಖಂಡರು ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸಮಾಜದವರು ಈ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ತಿಳಿಸಿದರು.

ಪ್ರವಾಸದ ವಿಚಾರವಾಗಿ ಹೆಚ್ಚಿನ ಮಾಹಿತಿಗಾಗಿ. ತಾಲ್ಲೂಕು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಖಜಾಂಚಿ ಮಂಜುನಾಥ ಕಾತ್ರಿಕೇನಹಳ್ಳಿ ಮೊ.ನಂ. 9980835704 ಸಂಪರ್ಕಿಸಬಹುದಾಗಿದೆ ಎಂಬುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್, ಕುಂಚಿಟಿಗರ ಸಮಾಜದ ಅಧ್ಯಕ್ಷರಾದ ಪ್ರೊಫೆಸರ್ ಮೈಸೂರ್ ಶಿವಣ್ಣ, ಗೌರವಾಧ್ಯಕ್ಷ ಗಡಾರಿಕೃಷ್ಣಪ್ಪ, ಪ್ರಧಾನಕಾರ್ಯದರ್ಶಿ ಕೆ.ಜಿ.ಹನುಮಂತರಾಯ್, ದಿಂಡಾವರಚಂದ್ರಗಿರಿ, ಉಪಾಧ್ಯಕ್ಷರಾದ ಶಶಿಕಲಾ, ಪಿಲಾಜನಹಳ್ಳಿರಾಮಸ್ವಾಮಿ, ಕೆ.ಕೆ.ಹಟ್ಟಿ ಜಯಪ್ರಕಾಶ್, ಹುಚ್ಚವನಹಳ್ಳಿ ಅವಿನಾಶ್, ಗಿರೀಶ್ ಆಪ್ಟಿಕಲ್ಸ್ ರಾಜೇಶ್,  ಇತರರು ಹಾಜರಿದ್ದು ಸಲಹೆ ಸೂಚನೆ ನೀಡಿದರು.

About The Author

Leave a Reply

Your email address will not be published. Required fields are marked *