

ಹಿರಿಯೂರು:
ಕನ್ನಡಚಿತ್ರರಂಗದಲ್ಲಿ ನಾಗರಹಾವು, ಚಲನಚಿತ್ರದಿಂದ ಚಿತ್ರಜೀವನ ಆರಂಭಿಸಿ, ಸಾಹಸಸಿಂಹ, ಸೂರ್ಯವಂಶ ಸೇರಿದಂತೆ ಸುಮಾರು 220 ಕ್ಕೂ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರಖ್ಯಾತರಾದ ಡಾ. ವಿಷ್ಣುವರ್ಧನ್ ರವರಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿರುವುದು ತುಂಬಾ ಸಂತಸ ತಂದಿದೆ ಎಂಬುದಾಗಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರು ಹನುಮಂತರಾಯಪ್ಪ ಹೇಳಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ವಿಷ್ಣುವರ್ಧನ್ ಅಭಿಮಾನಿ ಬಳಗದ ವತಿಯಿಂದ ಸಮೀಉಲ್ಲಾ ಇವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ವಿಷ್ಣುವರ್ಧನ್ ರವರ 75ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.

ವಿಷ್ಣುವರ್ಧನ್ ಅಭಿಮಾನಿ ಬಳಗದ ಸಮೀಉಲ್ಲಾ ಮಾತನಾಡಿ, ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ರವರು ನಮ್ಮ ಕನ್ನಡಿಗರ ಹೆಮ್ಮೆಯ ನಟರಾಗಿದ್ದು, ತಮಿಳು, ತೆಲುಗು, ಮಲೆಯಾಳಂ, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಜನಮೆಚ್ಚುಗೆ ಗಳಿಸಿದ್ದರು, ಇವರು ಇಂದಿನ ಯುವನಟರಿಗೆ ಸ್ಪೂರ್ತಿಯಾಗಿದ್ದಾರೆ ಎಂಬುದಾಗಿ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಹಿರಿಯ ಪತ್ರಕರ್ತರಾದ ಎಂ.ರವೀಂದ್ರನಾಥ್, ಕಿರಣ್ ಮಿರಜ್ಕರ್, ವಿಜಯಕುಮಾರ್, ಮಹೇಶ್, ಅಲ್ತಾಫ್, ಶ್ರೀಮತಿ ಸೌಮ್ಯಜಗನ್ನಾಥ್. ಶ್ರೀಮತಿ ಸಾಕಮ್ಮ, ಶ್ರೀಮತಿ ಮಣಿಮಹೇಶ್, ಮಹೇಶ್ ಕುಮಾರ್, ಸುಹೇಲ್, ಶಕೀಲ್ ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.