
ಹಿರಿಯೂರು:
ಹಿರಿಯೂರು ತಾಲ್ಲೂಕು ಸಾಹಿತ್ಯ, ಸಂಗೀತ ,ಜಾನಪದಕಲೆ ಹಾಗೂ ರಂಗಕಲೆಗೆ ತನ್ನದೇ ಆದ ಕೊಡುಗೆ ನೀಡಿದೆ ಎಂಬುದಾಗಿ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿಸಕ್ಕರಅವರು ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯೂರು ತಾಲ್ಲೂಕಿನ ಇತಿಹಾಸ ಮತ್ತು ಸಂಸ್ಕೃತಿ ಗೋಷ್ಠಿಯಲ್ಲಿ ರಂಗಭೂಮಿಗೆ ಹಿರಿಯೂರು ತಾಲ್ಲೂಕಿನ ಕೊಡುಗೆ ಕುರಿತು ಅವರು ಮಾತನಾಡಿದರು.
ಹಿರಿಯೂರಿನ ಸಾಂಸ್ಕೃತಿಕ ಅಸ್ಮಿತೆಗೆ ಜಾನಪದ ಕಲೆ, ಸಾಹಿತ್ಯ, ಸಂಗೀತ ಬೆಳಕು ನೀಡಿದ್ದು ರಂಗಕಲೆ ಪ್ರಮುಖ ಪಾತ್ರ ವಹಿಸಿದೆ. 1970ರ ದಶಕದಲ್ಲಿ ತೊರೆ ಓಬೇನಹಳ್ಳಿ ಟಿ.ಪಾಂಡುರಂಗನಾಯಕ ರವರು ಭಾರತಿ ಕಲಾವಿದರು ಎಂಬ ನಾಟಕ ಸಂಘವನ್ನು ಹುಟ್ಟು ಹಾಕಿದರು.
ಇವರ ಜೊತೆಯಲ್ಲಿ ಎಂ.ಆರ್. ಲಕ್ಷ್ಮಣ್ ಮಲ್ಲಪ್ಪನಹಳ್ಳಿ, ರಂಗೇನಹಳ್ಳಿಗಿರಿಯಣ್ಣ, ರಾಜಣ್ಣಶೆಟ್ಟಿ, ಬಿ.ವಿ.ಮಾಧವ, ಎಚ್.ಎನ್. ನರಸಿಂಹಯ್ಯ, ಹೆಚ್.ಆರ್.ಕಣ್ಣಪ್ಪ, ಎಲ್.ನಾರಾಯಣಚಾರ್ , ಜಿ.ಧನಂಜಯ ಕುಮಾರ್, ಕೆಂಚಪ್ಪ, ವಿ.ಎಚ್. ರಾಜು, ನಾಗೇನಹಳ್ಳಿ ತಿಮ್ಮಯ್ಯ, ಡಾ.ಎಂ. ಎನ್ . ಶ್ರೀಪತಿ, ಅಮೀರ್ ಖಾನ್ ಇತರರು ಜೊತೆಗೂಡಿ ಅಂಗುಲಿಮಾಲ, ವಾತ್ಸಲ್ಯ, ಸಿಂಹಗಡ, ಅಣ್ಣ ತಂಗಿ, ಆದರ್ಶ ಪ್ರೇಮ, ರಕ್ತರಾತ್ರಿ , ರತ್ನ ಮಾಂಗಲ್ಯ ,ರಾಜ ವೀರ ಮದಕರಿ ನಾಯಕ, ಟಿಪ್ಪು ಸುಲ್ತಾನ್, ಎಚ್ಚಮನಾಯಕ ಹೀಗೆ ಹಲವಾರು ನಾಟಕಗಳನ್ನು ಹಿರಿಯೂರಿನ ವಿವಿಧ ಹಳ್ಳಿಗಳಲ್ಲಿ ಬೇರೆ ಬೇರೆ ತಾಲ್ಲೂಕುಗಳಲ್ಲಿ ಅಭಿನಯಿಸಿದ್ದಾರೆ .

ಬೆಳಗೆರೆಯ ಕೃಷ್ಣ ಶಾಸ್ತ್ರಿ ರವರು ಬರೆದಿರುವ “ಹಳ್ಳಿಚಿತ್ರ” ನಾಟಕ ರಾಜ್ಯಾದ್ಯಂತ ಪ್ರದರ್ಶನ ಕಂಡಿದೆ.1948ರಲ್ಲಿ ಸಿ.ಎಸ್.ವೆಂಕಟೇಶಯ್ಯ ರವರು ವಿಜಯ ಕಲಾವಿದರು ಎಂಬ ತಂಡವನ್ನು ಕಟ್ಟಿದರು. ಎಂ.ಎಸ್.ಅವಧಾನಿ, ಕೆ.ವಿ.ರಾಮಚಂದ್ರರಾವ್, ಜೊತೆಗೂಡಿ ಜಗಜ್ಯೋತಿ ಬಸವೇಶ್ವರ ಎಚ್ಚಮ ನಾಯಕ ಹಳ್ಳಿ ಚಿತ್ರ . ತ್ರಿವೇಣಿ ಮುಂತಾದ ನಾಟಕಗಳನ್ನು ಅಭಿನಯಿಸಿದರು.
ತರುವಾಯ ತಾಲ್ಲೂಕಿನ ವೃತ್ತಿ ಕಲಾವಿದರು ವೃತ್ತಿ ಕಲಾವಿದರ ಸಂಘವನ್ನು ಕಟ್ಟಿ ಹಲವಾರು ನಾಟಕಗಳನ್ನು ಅಭಿನಯಿಸಿದ್ದಾರೆ. ಜಯಮ್ಮ, ಹನುಮಕ್ಕ, ಭಾಗ್ಯಶ್ರೀ, ವಿಮಾಲಾಕ್ಷಿ, ಜಯಲಕ್ಷ್ಮಿ, ಭಾರತಿ ,ಭುವನೇಶ್ವರಿ, ರಾಜೇಶ್ವರಿ ,ನಗೀನ, ನಿರ್ಮಲ, ಮಮತಾ, ಅಂಬಿಕಾ ಇನ್ನೂ ಮುಂತಾದವರು ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ.
ಇವರ ಜೊತೆಯಲ್ಲಿ ಇನ್ನೂ ಹಲವಾರು ಸಂಘ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಮುಖ್ಯವಾಗಿ ಲಾವಣ್ಯಕಲಾವೃಂದ, ಫ್ರೆಂಡ್ಸ್ ಕಲಾವೃಂದ. ದುರ್ಗಿಗುಡಿ ಕಲಾಸಂಘ, ಸೊಂಡೆಕೆರೆ ಮಂಜುನಾಥ ನಾಟ್ಯಕಲಾಸಂಘ , ಸಂಪದ ಕಲಾಸಂಘ, ಹೀಗೆ ಹಲವಾರು ಸಂಘ ಸಂಸ್ಥೆಗಳು ಹಿರಿಯೂರಿನ ರಂಗಭೂಮಿಗೆ ತನ್ನದೇ ಆದ ಕೊಡುಗೆಯನ್ನು ನೀಡಿವೆ.
ಎನ್.ಎಸ್.ಎಸ್. ಘಟಕದ ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ ಡಾ.ಡಿ. ಧರಣೇಂದ್ರಯ್ಯ ರವರು ಮಾತನಾಡಿ ಹಿರಿಯೂರು ತಾಲ್ಲೂಕು ಜಾನಪದ ಕಲೆ ರಂಗಭೂಮಿಗೆ ಮಾತ್ರವಲ್ಲದೇ ರಾಜಕೀಯ ಶಕ್ತಿಯಾಗಿ ಕೆಲಸ ಮಾಡಿದೆ. ವಿ.ಮಸಿಯಪ್ಪ, ಬಿ. ಎಲ್. ಗೌಡ್ರು, ಮಸ್ಕಲ್ ರಾಮಯ್ಯ, ಹೆಚ್.ಏಕಾಂತಯ್ಯ , ಕೆ.ಎಚ್.ರಂಗನಾಥ್, ಡಿ. ಮಂಜುನಾಥ್, ಡಿ.ಸುಧಾಕರ್, ಪೂರ್ಣಿಮಾಶ್ರೀನಿವಾಸ್ ಹೀಗೆ ಹಲವಾರು ರಾಜಕಾರಣಿಗಳಿಗೆ ರಾಜಕೀಯ ಶಕ್ತಿಯನ್ನು ನೀಡಿದೆ ಎಂಬುದಾಗಿ ಅವರು ಹೇಳಿದರು.
ಹಿರಿಯೂರು ತಾಲ್ಲೂಕಿನ ನೀರಾವರಿಯ ಚಿಂತನ-ಮಂಥನ ಕುರಿತು ರಾಜ್ಯ ವಿಭಾಗಿಯ ರೈತ ಸಂಘದ ಉಪಾಧ್ಯಕ್ಷರಾದ ಕೆ.ಸಿ.ಹೊರಕೇರಪ್ಪ ಮಾತನಾಡಿದರು. ಹಾಗೆಯೇ ತಾಲ್ಲೂಕಿನ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟತೆ ಕುರಿತು ಉಪನ್ಯಾಸಕರಾದ ಜಿ.ಡಿ.ಚಿತ್ತಣ್ಣ ಮಾತನಾಡಿದರು. ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಜಿ.ಪರಮೇಶ್ವರಪ್ಪ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷರಾದ ಫ್ರೊ.ಎಂ.ಜಿ.ರಂಗಸ್ವಾಮಿ, ರೈತ ಮುಖಂಡರಾದ ಕ.ಸಾ.ಪ. ಕೋಶಾಧ್ಯಕ್ಷರಾದ ಜಿ. ಪ್ರೇಮಕುಮಾರ್, ಆರನಕಟ್ಟೆಶಿವಕುಮಾರ್, ಕಸವನಹಳ್ಳಿರಮೇಶ್, ಜೆ.ನಿಜಲಿಂಗಪ್ಪ, ಹರ್ತಿಕೋಟೆಮಹಾಸ್ವಾಮಿ, ಚಮನ್ ಶರೀಫ್, ಶಿಕ್ಷಕರಾದರಾಧ ಕೆ.ಜಿ. ಹನುಮಂತರಾಯಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

