
ಹಿರಿಯೂರು:
ಕನ್ನಡ ತಾಯಿಭಾಷೆ, ಬಹುತ್ವದಭಾಷೆ, ಕನ್ನಡ ಸಾಹಿತ್ಯವು ಮನಸ್ಸಿನ ಬೀಜಗಳಿದ್ದಂತೆ ಎಂಬುದಾಗಿ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಎಂ.ಜಿ.ರಂಗಸ್ವಾಮಿ ಅವರು ಹೇಳಿದರು.
ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಜಗತ್ತಿನಲ್ಲಿ ಎಲ್ಲಾ ಭಾಷೆಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕನ್ನಡ ಭಾಷೆಗಿದೆ. ಆಂಗ್ಲಭಾಷೆಯ ಉಪನ್ಯಾಸಕನಾಗಿ ಕನ್ನಡ ಸಾಹಿತ್ಯ ಮತ್ತು ಬರವಣಿಗೆಯ ಮೂಲಕ ಇತಿಹಾಸದಲ್ಲಿ ದಾಖಲಾಗಿರುವ ಸಂಗತಿಗಳನ್ನು ಹೊರಚೆಲ್ಲಿರುವೆ. ಬ್ರೀಟಿಷರ ಕಾಲದಲ್ಲಿ ನಡೆದಅಭಿವೃದ‍್ದಿ ಕಾರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿ ಬುಕನಾನ್ ಪುಸ್ತಕಗಳನ್ನು ಬರೆದಿದ್ದು, ಬರವಣಿಗೆಗೆ ಸಂಶೋಧನಾ ವಿಧಾನಗಳಮನ್ನು ಅನುಸರಿಸಬೇಕಿದೆ.ಎಂದರಲ್ಲದೆ,
ಕನ್ನಡದ ಮನಸ್ಸುಗಳು ಓದುಗರ ಪ್ರೋತ್ಸಾಹ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದ್ದು ಮತ್ತು ಬರವಣಿಗೆಗೆ ಪ್ರೇರಣೆ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೀಳು ಅಭಿರುಚಿ ಬರಹಗಳನ್ನು ಅದರ ಸತ್ಯ-ಅಸತ್ಯವನ್ನು ಗ್ರಹಿಸಬೇಕು. ಪದಗಳ ಅರ್ಥಗಳನ್ನು ಅರ್ಥೈಸಿಕೊಳ್ಳಬೇಕು. ಸಾಹಿತ್ಯ ಸಮ್ಮೆಳನಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಎಂಬುದಾಗಿ ಅವರು ಹೇಳಿದರು.

ಪತ್ರಕರ್ತರಾದ ಮಾಲತೇಶ್ ಅರಸ್ ಅವರು ಮಾತನಾಡಿ ಸಾಹಿತ್ಯವನ್ನು ಬಹುರೂಪಿ ಆಯಾಮಗಳಲ್ಲಿ ಗುರುತಿಸಬಹುದು.ಆಸಕ್ತಿವಂತರ ಸಂಖ್ಯೆ ಕ್ಷೀಣಿಸುತ್ತಿದೆ. ಸಾಕಷ್ಟು ಸಂಖ್ಯೆ ಅರ್ಹ ಬರಹಗಾರರಿಗೆ , ಕವಿಗಳಿಗೆ ಅವರ ಭಾವನೆಗಳನ್ನು ನಿವೇದಿಸಿಕೊಳ್ಳಲು ಸಾಹಿತ್ಯ ಆಸಕ್ತಿಯ ವೇದಿಕೆಗಳು ಸಿಗುತ್ತಿಲ್ಲ ಎಂಬುದಾಗಿ ಅವರು ಹೇಳಿದರು.
ಕ.ಸಾ.ಪ.ಕೋಶಾಧಿಕಾರಿ ಜಿ.ಪ್ರೇಮ್ ಕುಮಾರ್ ಅವರು ಮಾತನಾಡಿ ಸಾಹಿತ್ಯ ಚಟುವಟಿಕೆಗಳ ಪ್ರೋತ್ಸಾಹಕ ವಾತಾವರಣಕ್ಕೆ ಸದಾ ಬೆಂಬಲವಾಗಿ ನಿಲ್ಲಲಾಗುವುದು. ತಾಲ್ಲೂಕಿನಲ್ಲಿ ಯಳನಾಡುಅಂಜನಪ್ಪ, ರಾಜಣ್ಣಶೆಟ್ಟಿ ಸೇರಿದಂತೆ ಅನೇಕರು ತಮ್ಮ ಅನನ್ಯ ಸೇವೆಯನ್ನು ನೀಡಿದ್ದಾರೆ ಎಂಬುದಾಗಿ ಸ್ಮರಿಸಿದರು. ಕ.ಸಾ.ಪ. ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಸಮ್ಮೇಳನದ ನಿರ್ಣಯ ಮಂಡಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಲಲ್ಲಿ ಸಾಧನೆ ಮಾಡಿರುವ ಡಾ.ಡಿ.ಎಂ.ಗೌಡ, ಜಿ.ಡಿ.ತಿಮ್ಮಯ್ಯ, ಹೆಚ್.ಎಸ್.ಸುಂದರ್ ರಾಜ್, ತನುಜೀಯಾ ನಾಝ್, ಎಂ.ವೈ.ರಾಜೀವ್, ಲಲಿತಮ್ಮ, ಮಂಜುಳ, ಕುಸುಮಯೋಗೀಶ್ ಬಡಕ್ಕ, ಆರ್.ತಿಪ್ಪೇಸ್ವಾಮಿ, ಗೀತಾಭಟ್, ಸಣ್ಣಮ್ಮ, ಟಿ.ರಂಗನಾಥ್, ಪಾಥೇಗೌಡ ಸಾಧಕರನ್ನು ಸ್ಮರಿಸಲಾಯಿತು.
ಈ ಸಮಾರೋಪ ಸಮಾರಂಭದಲ್ಲಿ ಫ್ರೊ.ಶಿವಲಿಂಗಪ್ಪ, ಫ್ರೊ.ಮೀರಸಾಬೀಹಳ್ಳಿ, ಸಕ್ಕರರಂಗಸ್ವಾಮಿ, ವಿರೇಶ್, ಶಿವಮೂರ್ತಿ, ಚಮನ್ ಷರೀಫ್, ಫ್ರಕೃದ್ಧೀನ್, ಜಿ.ಎಲ್.ಮೂರ್ತಿ, ಹರ್ತಿಕೋಟೆಮಹಾಸ್ವಾಮಿ,ಬಸವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

