
ಹಿರಿಯೂರು:
ಮಾಂಟೆಸ್ಸರಿ ಶಾಲೆ ಹಾಗೂ ಎಸ್.ಆರ್.ಪಿ.ಯು ಕಾಲೇಜ್ ಬಡಮಕ್ಕಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಬಡವರ ಬಗ್ಗೆ ಕಾಳಜಿ ವಹಿಸಿದೆ ಎಂಬುದಾಗಿ ವಿಧಾನಸಭಾ ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷರಾದ ಎ.ಎಂ.ಅಮೃತೇಶ್ವರಸ್ವಾಮಿ ಅವರು ಹೇಳಿದರು.
ನಗರದ ಹುಳಿಯಾರು ರಸ್ತೆಯ ಮಾಂಟೆಸ್ಸರಿ ಪಬ್ಲಿಕ್ ಸ್ಕೂಲ್ ಹಾಗೂ ಶ್ರೀ ರಂಗನಾಥ ಪಿ.ಯು. (ಎಸ್.ಆರ್.ಪಿ.ಯು) ಕಾಲೇಜಿನಲ್ಲಿಅದ್ದೂರಿಯಾಗಿ ನಡೆದ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ವ್ಯಾಸಂಗ ಮಾಡುತ್ತಿದ್ದು, ಉತ್ತಮ ಫಲಿತಾಂಶ ಪಡೆದಿರುವುದು ಬೋಧಕ ವೃಂದ ಹಾಗೂ ಆಡಳಿತ ಮಂಡಳಿಗೆ ಸಂದ ಗೌರರವಾಗಿದೆ.ಈ ಸಂಸ್ಥೆ ಇನ್ನೂ ಹೆಚ್ಚಿನ ಶೈಕ್ಷಣಿಕ ಸೇವೆಯನ್ನು ಬಡವರಿಗೆ, ಗ್ರಾಮೀಣ ಮಕ್ಕಳಿಗೆ ನೀಡಲಿ ಎಂಬುದಾಗಿ ಅವರು ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ.ತಿಪ್ಪೇಸ್ವಾಮಿ ಅವರು ಮಾತನಾಡಿ , ಪರೀಕ್ಷೆಗಳು ಸಮೀಪಿಸುತ್ತಿದ್ದು, ಪರೀಕ್ಷೆಗಳ ಬಗ್ಗೆ ಆತಂಕ ಪಡದೆ ಶ್ರದ್ಧೆಯಿಂದ ಓದಿ ಯಶಸ್ಸು ಗಳಿಸುವಂತೆ ಅವರು ಸಲಹೆ ನೀಡಿದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಎಜುಕೇಶನ್ ಆಂಡ್ ಕಲ್ಚರಲ್ ಅಸೋಸಿಯೇಷನ್ ಕಾರ್ಯದರ್ಶಿ ಟಿ.ವೀರಕರಿಯಪ್ಪ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ, ಶಿಕ್ಷಣ ಸಂಯೋಜಕರಾದ ಶಿವಾನಂದ, ರಾಜ್ಯ ಸಂಪನ್ಮೂಲ ಶಿಕ್ಷಕರಾದ ಡಿ.ಶಿವಮೂರ್ತಿ, ಉಪನ್ಯಾಸಕರಾದ ನಾಗಣ್ಣ, ನಗರಸಭಾ ಮಾಜಿ ಸದಸ್ಯರಾದ ಶಿವರಂಜಿನಿಯಾದವ್, ಝೇಂಕಾರ್ ರಂಗನಾಥ್, ಎಸ್.ಆರ್.ಪಿ.ಯು. ಕಾಲೇಜಿನ ಹಿರಿಯ ಶಿಕ್ಷಕರಾದ ಓಂಕಾರಪ್ಪ, ರಂಗಸ್ವಾಮಿ, ಮಹಾಲಿಂಗಪ್ಪ, ಸುನಂದಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜಿನ ಪ್ರಾಂಶುಪಾಲರು, ಮುಖ್ಯೋಪಧ್ಯಾಯರು, ಉಪನ್ಯಾಸಕ ವರ್ಗ, ಪೋಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

