March 2, 2026
06

ಹಿರಿಯೂರು :

ಕುಂಚಿಟಿಗರು ಬಹುತೇಕ ಹಳ್ಳಿಗಾಡಿನ ಕುಗ್ರಾಮಗಳಲ್ಲಿ ನೆಲೆಸಿ ಕೃಷಿ, ಕೂಲಿ, ಪಶುಸಂಗೋಪನೆ, ಹೈನುಗಾರಿಕೆ ಮಾಡಿಕೊಂಡು ಶ್ರಮ ಜೀವನ ಮಾಡುತ್ತಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಕುಂಚಿಟಿಗರಿಗೆ ಕೇಂದ್ರ ಸರ್ಕಾರದ ಓ. ಬಿ. ಸಿ. ಮೀಸಲಾತಿ ಮತ್ತು ರಾಜ್ಯ ಸರ್ಕಾರ ಪ್ರವರ್ಗ -1ರಲ್ಲಿ ಮೀಸಲಾತಿ ಕಲ್ಪಿಸಲು 2018ರಲ್ಲಿ ರಾಜ್ಯ ಸರ್ಕಾರ ನಡೆಸಿದ ಕುಲಶಾಸ್ತ್ರೀಯ ಅಧ್ಯಯನ ವರದಿ ಶಿಫಾರಸ್ಸು ಮಾಡಿರುವುದರಿಂದ ಕುಂಚಿಟಿಗರಿಗೆ ಪ್ರವರ್ಗ 1 ರಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬುದಾಗಿ  ಕರ್ನಾಟಕ ರಾಜ್ಯ ಕುಂಚಿಟಿಗರ ಒಕ್ಕೂಟದ ಜಂಟಿ ಕಾರ್ಯದರ್ಶಿ ಎಸ್. ವಿ. ರಂಗನಾಥ್  ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಪೂರ್ವಕ ಒತ್ತಾಯ ಮಾಡಿದ್ದಾರೆ.

ಮೀಸಲಾತಿ ನೆಪದಲ್ಲಿ ಆಸೆಗಾಗಿ  ಸ್ವಾಭಿಮಾನಿ ಕುಂಚಿಟಿಗರು ಕಾನೂನು ಬಾಹಿರವಾಗಿ ಅವರಿವರ ಮಾತು ಕೇಳಿ ಜಾತಿ ಜನಗಣತಿಯಲ್ಲಿ ಬೇರೆ ಜಾತಿ ಹೆಸರು ಬರೆಯಿಸಿಬೇಡಿ. ಜಾತಿ ಬದಲಾವಣೆ ಅಕ್ಷಮ್ಯ ಹಾಗೂ ಶಿಕ್ಷಾರ್ಹ ಅಪರಾಧ ಆಗುತ್ತದೆ.

ಆದ್ದರಿಂದ ಸಮಸ್ಥ ಕುಂಚಿಟಿಗರು ಜಾತಿ ಮತ್ತು ಉಪಜಾತಿ ಕಾಲಂ ನಲ್ಲಿ ಕುಂಚಿಟಿಗ ಕೋಡ್ :ಎ-0795 ಮಾತ್ರ ಬರೆಯಿಸಿ, ಗಣತಿದಾರರು ಏನು ಬರೆದುಕೊಂಡಿದ್ದಾರೆ ಎಂದು ಕಣ್ಣಾರೆ ನೋಡಿ ಖಚಿತ ಪಡಿಸಿಕೊಳ್ಳಬೇಕು ಎಂಬುದಾಗಿ  ಅವರು ಮನವಿ ಮಾಡಿದ್ದಾರೆ.                                                     

About The Author

Leave a Reply

Your email address will not be published. Required fields are marked *