March 2, 2026
1

ಹಿರಿಯೂರು:

ನಗರದ ಗಾಂಧೀ ವೃತ್ತದ ಬಳಿ  ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಮುಂದುವರೆದಿದೆ.

ತಾಲ್ಲೂಕಿನಲ್ಲಿರುವ ಕಲುವಳ್ಳಿ ಭಾಗದ 16ಕೆರೆಗಳಿಗೆ ಜವಗೊಂಡನಹಳ್ಳಿ ಗಾಯಿತ್ರಿ ಕೆರೆ ಹಾಗೂ ಐಮಂಗಳ ಹೋಬಳಿಯಲ್ಲಿರುವ  ಎಲ್ಲಾ ಕೆರೆಗಳನ್ನು ತುಂಬಿಸಬೇಕು. ವಾಣಿವಿಲಾಸ ಸಾಗರ ಜಲಾಶಯಕ್ಕೆ5 ಟಿ.ಎಂ.ಸಿ. ನೀರು ಭದ್ರಾದಿಂದಾಗಲಿ ಎತ್ತಿನಹೊಳೆ ಮುಖಾಂತರ ಹರಿಸಬೇಕು ಎಂಬುದಾಗಿ ಒತ್ತಾಯಿಸಿದರು.

ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಪತಹಶೀಲ್ದಾರ್ ರವರಿಗೆ  ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸುವುದಾಗಿ ಅವರು ಭರವಸೆ ನೀಡಿದರು.

ಈ ಧರಣಿ ಸತ್ಯಾಗ್ರಹದಲ್ಲಿ  ತಾಲ್ಲೂಕು ಅಧ್ಯಕ್ಷರಾದ ವೆಂಕಟೇಶ್, ಆಲೂರುಸಿದ್ಧರಾಮಣ್ಣ, ರೈತ ಮುಖಂಡರು  ಸೇರಿದಂತೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *