March 6, 2026
00003

ಹಿರಿಯೂರು:

ರಾಷ್ಟ್ರಕವಿ ಕುವೆಂಪು, ಯು .ಆರ್. ಅನಂತಮೂರ್ತಿ, ಪಿ.ಲಂಕೇಶ್ ಜೆ .ಜವರೇಗೌಡ, ಚಂದ್ರಶೇಖರ ಪಾಟೀಲ್ ಹೀಗೆ ಹಲವು ಕವಿಗಳ ಬರಹಗಳಿಂದ ಪ್ರಭಾವಿತನಾಗಿ ನಾನು ನನ್ನ ಬರವಣಿಗೆಯನ್ನ ಬರೆಯಲು ಸ್ಪೂರ್ತಿಯಾಗಿತು ಎಂದು ಹಿರಿಯೂರು ತಾಲ್ಲೂಕು ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪ್ರೊ.ಎಂ.ಜಿ.ರಂಗಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಸಿಎಂ ಲೇಔಟ್ ನಲ್ಲಿರುವ ಎಂ.ಜಿ.ಆರ್, ಮನೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜಿತಗೊಂಡಿರುವ ಎಂ.ಜಿ ರಂಗಸ್ವಾಮಿ ಅವರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಾಹಿತ್ಯ, ಸಂಗೀತ, ರಂಗಕಲೆ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ನಾಡಿನ ಕಲೆ ಸಂಸ್ಕೃತಿ ಸಾಹಿತ್ಯ ಉಳಿಸಲು ಇವುಗಳು ಪ್ರೇರಣೆಯಾಗಿದೆ, ಬರಹಗಳು ನಾಡಿನ ಇತಿಹಾಸ ಪರಿಚಯಿಸುವ ಮೂಲಕ ಸಾಹಿತ್ಯದ ನೈಜತೆಯನ್ನು ಸಾರುತ್ತವೆ, ಎಂಬುದಾಗಿ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವಾಮಿ ಸಕ್ಕರ,ಮಾತನಾಡಿ ಹಿರಿಯೂರಿನಲ್ಲಿ ನಡೆಯುವ  ಏಳನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಜಿ.ರಂಗಸ್ವಾಮಿ ಅವರು ತಾಲೂಕಿನ ಮಲ್ಲಪ್ಪನಳ್ಳಿ ಗ್ರಾಮದವರು ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಹಾಗೂ ಪತ್ರಕರ್ತರಾಗಿ ಮಾಡಿದಂತ ಸೇವೆ ಅನನ್ಯವಾಗಿದೆ.

ಹಿರಿಯೂರು  ಸೀಮೆಯ ಜಾನಪದ, ಚಿತ್ರದುರ್ಗದಲ್ಲಿ ಬುಕಾನನ್, ದುರ್ಗ ಸೀಮೆಯಲ್ಲಿ ಸಾಧಕರು ಬೆಂಗಳೂರಿನಲ್ಲಿ ಬುಕಾನನ್ ಹೀಗೆ ಹಲವಾರು ಕೃತಿಗಳನ್ನು ನಾಡಿಗೆ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ, ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು  ಔಚಿತ್ಯಪೂರ್ಣವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಮಹಮ್ಮದ್ ಫಕ್ರುದ್ದೀನ್, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಜೆ.ನಿಜಲಿಂಗಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ  ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಟಿ. ಶಂಕರಲಿಂಗಯ್ಯ, ಎಸ್. ನಾಗಸುಂದರಮ್ಮ , ಟಿ. ಸುಲೋಚನಾ, ಎಚ್.ಎಸ್.  ಚಂದ್ರವದನ, ಹೆಚ್. ಶಿವಮೂರ್ತಿ , ವೇದ ಪುಷ್ಪ ರಾಧಿಕಾ ಕವಿತಾ ಎಂ, ಜಿ, ಆರ್, ದಾಮಿನಿ, ಹಾಗೂ ಇತರರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *