
ಹಿರಿಯೂರು :
ಎರಡನೇ ದಿನದ ಧರಣಿ ಮುಂದುವರಿದಿದ್ದು, ಧರಣಿ ಸ್ಥಳಕ್ಕೆ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ, ನೀರಾವರಿ ಅಧಿಕಾರಿಗಳಾಗಲಿ, ಯಾರೊಬ್ಬರೂ ಸ್ಥಳಕ್ಕೆ ಬಂದಿಲ್ಲ ಆಡಳಿತ ವರ್ಗ ಸಂಪೂರ್ಣವಾಗಿ ಈ ಧರಣಿ ಹೋರಾಟವನ್ನು ನಿರ್ಲಕ್ಷ್ಯ ವಹಿಸಿರುತ್ತಾರೆ, ತಾಲೂಕು ಆಡಳಿತ ಹೀಗೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದಾಗಿ ರೈತಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲ್ಲೂಕಿನ ದಿಂಡಾವರ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ರೈತ ಮಹಿಳೆಯರು ಹಾಗೂ ರೈತರು ಒಟ್ಟಾಗಿ ಹಮ್ಮಿಕೊಳ್ಳಲಾಗಿದ್ದ 2 ನೇ ದಿನದ ಅಹೋರಾತ್ರಿ ಧರಣಿ ಸಭೆಯನ್ನು ಉದ್ದೇಶಿಸಿ, ನಂತರ ಅವರು ಮಾತನಾಡಿದರು.

ಇಂದು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ನೀರಾವರಿ ಮಂತ್ರಿಗಳು ಆದೇಶ ಕಾಫಿ ನೀಡಿದ್ದಾರೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ, ಇದರ ಬಗ್ಗೆ ಸಚಿವರು ಬಹಿರಂಗಪಡಿಸಬೇಕು. ಈಗಾಗಲೇ 3-4 ತಿಂಗಳ ಹಿಂದೆ 0.2 ಟಿಎಂಸಿ ನೀರು ಅಲೋಕೇಶನ್ ಆಗಿರುತ್ತದೆ, ಆದರೆ ಕಾಮಗಾರಿ ಪ್ರಾರಂಭಿಸದೇ ಇರುವುದು ಗಮನಿಸಿದರೆ ಕಲ್ವಳ್ಳಿ ಭಾಗದ ಜನರಿಗೆ ಮಾಡಿದ ಮೋಸವಾಗಿದ್ದು, ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾಡುಗೊಲ್ಲ ಅಧ್ಯಕ್ಷ ರಾಜಣ್ಣ ಧರಣಿ ಸ್ಥಳಕ್ಕೆ ಆಗಮಿಸಿ ಧರಣಿಯನ್ನು ಉದ್ದೇಶಿಸಿ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ಬೀದಿಯಲ್ಲಿ ಕೂತಿದ್ದಾರೆ, ಬಹಳ ವರ್ಷಗಳಿಂದ ನೀರಿನ ವಿಚಾರವಾಗಿ ಅನೇಕ ಬಾರಿ ಹೋರಾಟ ಚಳುವಳಿಗಳನ್ನು ಮಾಡುತ್ತಿದ್ದಾರೆ ಕೂಡಲೇ ಸಚಿವರು ಶಾಸಕರು ಈ ಹೋರಾಟದ ಕಡೆ ಗಮನಹರಿಸಿ, ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಈ 2 ನೇ ದಿನದ ಧರಣಿಯಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶ್, ಆಲೂರುಸಿದ್ದರಾಮಣ್ಣ, ದ್ರಾಕ್ಷಾಯಿಣಿ, ಗೀತಮ್ಮ, ನರಸಮ್ಮ, ಚಾಯಮ್ಮ, ಸಿದ್ದಮ್ಮ, ಸಂಜೀವಮ್ಮ, ಸಣ್ಣೀರಪ್ಪ, ದೇವರಾಜು, ಸತೀಶ್, ಜಯರಾಮ್, ಕೆ.ರಮೇಶ್, ಮಂಜುನಾಥ್, ಈರಪ್ಪ, ಕುಂಟಪ್ಪ, ಎಂ.ಆರ್. ಈರಣ್ಣ. ಕನ್ಯಪ್ಪ. ಬಾಲಕೃಷ್ಣ. ಶಿವಣ್ಣ. ತಿಮ್ಮಾರೆಡ್ಡಿ ಸೇರಿದಂತೆ ಅನೇಕ ರೈತಮುಖಂಡರುಗಳು ಉಪಸ್ಥಿತರಿದ್ದರು.

