
ಹಿರಿಯೂರು:
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರನ್ನು ಪ್ರಾಯೋಗಿಕವಾಗಿ ಹರಿಸುವುದನ್ನೇ ಕೆಲವು ರಾಜಕಾರಣಿಗಳು ಅತಿಯಾಗಿ ಬಿಂಬಿಸಿ ಮತ್ತೆ ಅಪೂರ್ಣ ಕೆಲಸಗಳ ನೆಪದಿಂದ ಜಿಲ್ಲೆಯ ಜನರನ್ನು ಮತ್ತೊಮ್ಮೆ ವಂಚಿಸುವುದನ್ನು ವಿರೋಧಿಸಿ ಮತ್ತು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಅನುದಾನ ಬಿಡುಗಡೆಗೊಳಿಸುವಂತೆ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಏಕಕಾಲಕ್ಕೆ ವಿವಿಧ ಮಾದರಿಯ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ಗಾಂಧಿ ವೃತ್ತದ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಅವರು ಮಾತನಾಡಿ ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಗೆ ನೀರು ಹರಿಸುವ ವಚಾರವಾಗಿ 2002ರಲ್ಲಿ 2000 ಕೋಟಿ ಹಣ ಸರ್ಕಾರ ಮೀಸಲಿಟ್ಟು ಭದ್ರಾ ಹಿನ್ನೀರಿನ ಮಾಗುಂಡಿ ಎಂಬ ಸ್ಥಳದಿಂದ ಸಹಜ ಹರಿವು(ಗ್ರಾವಿಟಿ) ಮೂಲಕ ವೇದಾವತಿ ನದಿಗೆ ನೀರು ಹರಿಸಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿ ಮಾಡಿ ಬಯಲು ಸೀಮೆಯ ಎಲ್ಲಾ ತಾಲ್ಲೂಕಿನ ರೈತರಿಗೂ ನೀರು ಹರಿಸಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿತ್ತು.

ಆದರೆ, ಅದನ್ನೇ ತಿರಿಚಿ, 2008ರಲ್ಲಿ ಮಾರ್ಗ ಬದಲಾಯಿಸುವುದರಿದ ಈ ವರೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಟುತ್ತಾ , ತೆವಳುತ್ತಾ ಸಾಗಿ, ಯೋಜನೆ ಗಾತ್ರ ಕೂಡ ಹೆಚ್ಚಾಗಿದೆ.ಪ್ರತಿ ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ನೀರು ಹೆರಿಸುವ ಸುಳ್ಳು ಭರವಸೆಗಳನ್ನು ಜನರಲ್ಲಿ ಬಿತ್ತುತ್ತಾ ವಂಚಿಸುತ್ತಿದ್ದಾರೆ.
ಈಗಲೂ ಜಿಲ್ಲೆಯಲ್ಲಿ ನೀರು ತುಂಬಿಸಲು ಯಾವುದೇ ಕೆರೆಗಳನ್ನು ಸಿದ್ಧಗೊಳಿಸಿಲ್ಲ.ಜಿಲ್ಲೆಯಲ್ಲಿ ತಾರತಮ್ಯವಿಲ್ಲದೆ ಪ್ರತಿ ರೈತರ ಜಮೀನಿಗೂ ನೀರು ಹರಿಸಲೇಬೇಕು. ಇದೇ ಬೇಸಿಗೆಯಲ್ಲಿ ತುಂಗಾದಿಂದ ಭದ್ರಾದವರೆಗಿನ ಕಾಮಗಾರಿಗಳು ಮತ್ತು ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಮಾಡಲು ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ, ಮಳೆಗಾಲದಲ್ಲಿ ನೀರು ಹರಿಸಲೇಬೇಕು ಎಂಬ ಛಲದೊಂದಿಗೆ ನಿರ್ದಿಷ್ಟ ಹೋರಾಟಕ್ಕೆ ಇಳಿಯಲೇ ಬೇಕಾಗಿದೆ. ಈ ಚಳುವಳಿಯನ್ನು ಕೇವಲ ತಾಲ್ಲೂಕು, ಜಿಲ್ಲೆ ಅಲ್ಲ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.
ಫೆಬ್ರವರಿ 10ರಂದು ಹಿರಿಯೂರು ತಾಲ್ಲೂಕು ಬಂದ್ ಮಾಡಲಾಗುವುದು. ಫೆಬ್ರವರಿ 12ರಂದು ಹಿರಿಯೂರು ನಗರದಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ಫೆಬ್ರವರಿ 13ರಂದು ಜಿಲ್ಲಾಧಿಕಾರಿ ಕಚೇರಿ ಹಾಗೂ ನೀರಾವರಿ ಇಲಾಖೆಗಳಿಗೆ ಮುತ್ತಿಗೆ ಹಾಕಿ ಸಮಾವೇಶ ನಡೆಸಲಾಗುವುದು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಬರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ, ಬಳಗಟ್ಟ ಸಿ.ವೆಂಕಟೇಶ್, ಗೌರವಾಧ್ಯಕ್ಷರಾದ ಆಲೂರುಸಿದ‍್ಧರಾಮಣ್ಣ, ರಾಜ್ಯ ಸಮಿತಿಯ ಪದಾಧಿಕಾರಿಗಳು: ಕಾರ್ಯಾಧ್ಯಕ್ಷರಾದ ಈಚಗಟ್ಟಿಸಿದ್ಧವೀರಪ್ಪ, ಹೊಳಲ್ಕೆರೆ ತಾಲ್ಲೂಕು ರಾಜ್ಯ ಉಪಾಧ್ಯಕ್ಷರಾದ ರೆಡ್ಡಿಹಳ್ಳಿವೀರಣ್ಣ, ಚಳ್ಳಕೆರೆ ತಾಲ್ಲೂಕು ರಾಜ್ಯ ಕಾರ್ಯಾಧ್ಯಕ್ಷರಾದ ಬೇಡರಹಳ್ಳಿಬಸವರೆಡ್ಡಿ, ಚಳ್ಳಕೆರೆಚಿಕ್ಕಣ್ಣ, ಬೊಂಬೇರಹಳ್ಳಿ ಜಿಲ್ಲಾ ಸಮಿತಿ ಪದಾದಿಕಾರಿಗಳು: ಅರಳಿಕೆರೆತಿಪ್ಪೇಸ್ವಾಮಿ, ದಿಂಡಾವರಸಣ್ಣತಿಮ್ಮಣ್ಣ, ರಾಮಣ್ಣಎಸ್.ಜಿ.ಹಳ್ಳಿ, ಆರ್.ಕೆ.ಗೌಡಗೌಡ ಹಿರಿಯೂರು, ಮಂಜುನಾಯಕ್ ಕುರುಬರಹಳ್ಳಿ, ತಾಲ್ಲೂಕು ಸಮಿತಿ ಪದಾಧಿಕಾರಿಗಳು :ರಂಗಸ್ವಾಮಿನಂದಿಹಳ್ಳಿ, ಚಂದ್ರಪ್ಪಕಣಜನಹಳ್ಳಿ, ನಾಗರಾಜ್ ರಂಗನಾಥಪುರ, ಹನುಮಂತಪ್ಪ ಸಾಲುಹುಣಸೆ, ಗಿರೀಶ್ ದಿಂಡಾವರ, ಶಿವಣ್ಣಆನೆಸಿದ್ರಿ, ರಮೇಶ್ ರಂಗಾಪುರ, ರಾಮಕೃಷ್ಣಜೆ.ಜೆ.ಹಳ್ಳಿ, ರಾಜಪ್ಪ ಕೆ.ಆರ್.ಹಳ್ಳಿ, ಸುರೇಶ್ ಕೆಂಚನಹಟ್ಟಿ, ವೀರಣ್ಣಗೌಡ ಆಲೂರು, ತಿಮ್ಮಾರೆಡ್ಡಿ, ಶಿವಣ್ಣ ಬಬ್ಬೂರುಫಾರಂ, ಗಿರೀಶ್ ಹುಚ್ಚವ್ವನಹಳ್ಳಿ, ವಿರುಪಾಕ್ಷಪ್ಪ ಗ್ರಾಮಪಂಚಾಯಿತಿ ಸದಸ್ಯ ದಿಂಡಾವರ, ಹಸಿರು ಸೇನೆ ಸಂಚಾಲಕರು ಮಂಜುನಾಥ್, ಜೂಲಯ್ಯನಹಟ್ಟಿ ಮಹಂತೇಶ್, ಬಗ್ಗನಡು ವೀರೇಶ್, ಮದ್ದನಕುಂಟೆ, ವೆಂಕಟೇಶ್, ಗುಡಿಹಳ್ಳಿ, ಸುರೇಶ್, ಕೆ.ಎಂ.ಹಟ್ಟಿ, ಜೆ.ಜಿ.ಹಳ್ಳಿ ಹೋಬಳಿ, ಈರಣ್ಣ ಹೋಬಳಿಯ ಅಧ್ಯಕ್ಷರು, ವಜೀರ್ ಸಾಬ್, ಕನ್ಯಪ್ಪ, ಎಂ.ಆರ್. ಈರಣ್ಣ, ರಾಜಕುಮಾರ್, ಕೆ.ಆರ್.ಹಳ್ಳಿ ರಾಮಣ್ಣ, ವಿರೇಶ್, ಗ್ರಾಮಪಂಚಾಯಿತಿ ಸದಸ್ಯರು, ಓಣಿಹಟ್ಟಿ, ಮಹೇಶ್, ಚಿತರಲಿಂಗಪ್ಪ, ಬಾಲಕೃಷ್ಣ, ಕರಿಯಪ್ಪ, ಚಂದ್ರಪ್ಪ, ಜೂಲಯ್ಯನಹಟ್ಟಿ ಜಯರಾಮಯ್ಯ, ಮಾರಣ್ಣ, ಮೂಡಲಹಟ್ಟಿ , ಮಹಾಲಿಂಗಪ್ಪ, ನಾಗೇಂದ್ರಪ್ಪ, ರಮೇಶ್, ಅಶ್ವಥಪ್ಪ, ಕರಿಯಾಲ, ಹನುಮಂತಪ್ಪ, ಮೈಲಾರಲಿಂಗಪ್ಪ, ಓಬಳಾಪುರ, ಸಣ್ಣೀರಪ್ಪ, ನಿಂಗಪ್ಪ, ದಿಂಡಾವರ, ಮಾಂತೇಶ್, ನಿರಂಜನಮೂರ್ತಿ, ಪಿಲಾಲಿ ಬಾಲಣ್ಣ, ಬಾಲದೇವರಹಟ್ಟಿ, ಪರಶುರಾಮ, ದ್ಯಾಮಣ್ಣ, ಮಾವಿನಮಡು, ಕೃಷ್ಣ, ಸೂರಪ್ಪನಹಟ್ಟಿ, ರವಿಕುಮಾರ್, ಲಕ್ಕೇನಹಳ್ಳಿ, ದೊರೆಸ್ವಾಮಿ ವೀರನಾಗತಿಹಳ್ಳಿ, ತಿಮ್ಮಣ್ಣ, ಕುಮಾರ, ದೇವೇಂದ್ರಪ್ಪ, ಮನೋಹರ, ಮಹೇಶ್ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
