March 2, 2026
4

ಹಿರಿಯೂರು :

ನಗರದಲ್ಲಿ ಫೆಬ್ರವರಿ 7ನೇ ಶನಿವಾರ ನಡೆಯಲಿರುವ ಹಿರಿಯೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲೇಖಕ ಎಂ ಜಿ ರಂಗಸ್ವಾಮಿ ಅವರನ್ನು ಗೊಲ್ಲಹಳ್ಳಿಯ ಜಟ್ ಸಿ ಬಿ ಎಸ್ ಸಿ ಶಾಲಾ ಮುಖ್ಯಸ್ಥರಾದ ಚಂದ್ರಶೇಖರ್ ಬೆಳಗೆರೆರವರ ನೇತೃತ್ವದಲ್ಲಿ ಹಾಗೂ ಸಂಸ್ಥೆ ಶಿಕ್ಷಕರಿಂದ ಆತ್ಮೀಯವಾಗಿ ಮನೆಯಂಗಳದಲ್ಲೇ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೊಲ್ಲಹಳ್ಳಿ ಜೆಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಬೆಳಗೆರೆ,  ಉಪಪ್ರಾಂಶಪಾಲ ಧನರಾಜ್, ಶಾಲೆಯ ಶಿಕ್ಷಕಿ ಹಾಗೂ ಕವಿಯತ್ರಿ ಸರಸ್ವತಿ ಕೆ.ನಾಗರಾಜ್ ಸೇರಿದಂತೆ ಹಲವಾರು ಶಿಕ್ಷಕರು, ರಂಗಸ್ವಾಮಿಯವರ ಮನೆಗೆ ತೆರಳಿ ಅಭಿಮಾನದ ಅಭಿನಂದನೆ ಸಲ್ಲಿಸಿದರು.

About The Author

Leave a Reply

Your email address will not be published. Required fields are marked *