
ಹಿರಿಯೂರು :
ಸಕ್ರಿಯ ರಾಜಕಾರಣಕ್ಕೆ ಜನತಾದಳ ತೊರೆದು ಹಿರಿಯೂರು ನಗರದ ಖ್ಯಾತ ವಕೀಲರಾದ ಹೆಚ್.ಮೊಹಮ್ಮದ್ ಷಾನವಾಜ್ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುತ್ತಾರೆ.
ಜನಸೇವೆಯ ಪ್ರಮಾಣಿಕ ಮನೋಭಾವ ಹೊಂದಿರುವ ಹೆಚ್.ಎಂ.ಷಾನವಾಜ್ ಪಕ್ಷ ಸೇರ್ಪಡೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಅತ್ಯಂತ ಉಪಯುಕ್ತವಾಗಲಿದ್ದು, ಮುಂಬರುವ ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದಾಗಿ ಡಿ.ಸುಧಾಕರ್ ರವರು ಹೇಳಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಶಾಲಿಯಾಗಿದ್ದು, ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸಲು ಕಾರ್ಯಕರ್ತರು ಸನ್ನದ್ದರಾಗಿದ್ದಾರೆ ಎಂದರು
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹೆಚ್ ಎಂ ಷಾನವಾಜ್ ಮಾತನಾಡಿ ಅಭಿಮಾನಿಗಳ ಹಿತೈಷಿಗಳ ಸಲಹೆಯ ಮೇರೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.
ಎಐಸಿಸಿ ಅಲ್ಪಸಂಖ್ಯಾತ ಘಟಕದ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಹಾಗೂ ತೆಲಂಗಾಣ ರಾಜ್ಯದ ಉಸ್ತುವಾರಿಗಳಾದ ಉಸ್ತುವಾರಿ ಗಳಾದ ಹೆಚ್.ಎಂ.ಷಕೀಲ್ ನವಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಸರ್ವಜನರ ಹಿತಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜನತಾದಳ ಪಕ್ಷವನ್ನು ತೊರೆದು ಮತ್ತಷ್ಟು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು
ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಾದತ್ ಉಲ್ಲಾ ಸೂರ್ಯೋದಯ ಅಜೀಜ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಎಸ್.ಟಿ.ಫಕ್ರು, ಪಿ.ಎಂ.ಸಾಧಿಕ್ ವುಲ್ಲಾ, ವಕೀಲ ಷಾನವಾಜ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸಾದತ್ ಉಲ್ಲಾ, ಸೂರ್ಯೋದಯ ಅಜೀಸ್ ಎಸ್.ಎಸ್.ಟಿ.ಫಕ್ರು, ಪಿ.ಎಂ.ಸಾಧತ್ ವುಲ್ಲಾ, ವಕೀಲರಾದ ನೂರು ಅಹಮದ್, ಮೊಹಮ್ಮದ್ ರಫಿ, ರಹಮಾನ್, ಹೆಚ್.ಬಾಬು, ಎಚ್.ಎಲ್.ನಬಿ, ರಹಮತ್ ಉಲ್ಲಾ, ಮಮತಾ, ವಿ.ಟಿ.ರಾಜು, ಸೈಫುಲ್ಲಾ, ರಜಿಯಾಸುಲ್ತಾನ ಇನ್ನು ಅನೇಕ ಮುಖಂಡರು ಉಪಸ್ಥಿತರಿದ್ದರು.

