March 6, 2026
05

ಹಿರಿಯೂರು:

ದಕ್ಷಿಣ ಕಾಶಿ ಎಂದು ಹೆಸರು ಪಡೆದಿರುವ ಶ್ರೀತೇರುಮಲೇಶ್ವರಸ್ವಾಮಿಯ ರಥೋತ್ಸವವು ಮತ್ತು ವಿವಿಧ ಪೂಜೆಗಳ ಕಾರ್ಯಕ್ರಮವನ್ನು ಫೆಬ್ರವರಿ 3ರಂದು ಶ್ರೀತೇರುಮಲೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತಿದ್ದು ಸಾರ್ವಜನಿಕ ಬಂಧುಗಳು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಥೋತ್ಸವವನ್ನು ಯಶಸ್ಸು ಗಳಿಸಲು ಪ್ರಾರ್ಥಿಸುತ್ತೇನೆ .

ಈ ರಥೋತ್ಸವದಲ್ಲಿ ಮುಕ್ತಿ ಬಾವುಟ ಪಡೆಯುವವರ ಹರಾಜು ಕಾರ್ಯಕ್ರಮವು ಬಹಳ ಮುಖ್ಯವಾಗಿರುತ್ತದೆ. ಈಗಾಗಲೇ ಅನೇಕ ವರ್ಷಗಳಿಂದ ಮುಕ್ತಿ ಬಾವುಟವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಈ ಕ್ಷೇತ್ರದ ಶಾಸಕರಾದ ಡಿ.ಸುಧಾಕರ್ ಅವರು ಹರಾಜಿನಲ್ಲಿ ಮುಕ್ತಿ ಬಾವುಟವನ್ನು ಪಡೆದು ಯಶಸ್ವಿಯಾಗಿ ಶ್ರೀತೇರುಮಲೇಶ್ವರಸ್ವಾಮಿಯ ಕೃಪೆಯಿಂದ ರಾಜಕೀಯದಲ್ಲಿ ಯಶಸ್ಸನ್ನು ಕಂಡು ಚುನಾವಣೆಯಲ್ಲಿ ವಿಜಯ ಗಳಿಸಿ ಮಂತ್ರಿಗಳಾಗಿ ಅಧಿಕಾರವನ್ನು ಪಡೆದಿರುತ್ತಾರೆ.

ಇದಕ್ಕೆಲ್ಲಾ ಸ್ವಾಮಿಯ ಆಶೀರ್ವಾದವೇ ಕಾರಣವೆಂದು ಭಕ್ತಾದಿಗಳು ನಂಬಿರುತ್ತಾರೆ. ಆದರೆ,  ಜಿಲ್ಲಾ ಸಚಿವರಾದ ಡಿ.ಸುಧಾಕರ್ ಅವರು ಕಳೆದ 2 ವರ್ಷಗಳಿಂದ ಹರಾಜಿನಲ್ಲಿ ಮುಕ್ತಿ ಬಾವುಟವನ್ನು ಪಡೆದಿರುತ್ತಾರೆ. ಆದರೆ ಅವರು ಹರಾಜಿನಲ್ಲಿ  ಕೂಗಿದ ಮುಕ್ತಿ ಬಾವುಟದ ಹಣವನ್ನು ಕಟ್ಟಿರುವುದಿಲ್ಲ ಎಂದು ತಿಳಿದು ಬಂದಿರುತ್ತದೆ ಎಂಬುದಾಗಿ ಬಿಜೆಪಿ ಮುಖಂಡ ಕೇಶವಮೂರ್ತಿ ಅವರು ಹೇಳಿದರು.

2024-25ರ ಸಾಲಿನಲ್ಲಿ ಮುಕ್ತಿ ಬಾವುಟವನ್ನು 18 ಲಕ್ಷ ರೂಪಾಯಿಗಳಿಗೆ ಹರಾಜಿನಲ್ಲಿ ಕೂಗಿದ್ದು, ಮತ್ತು 2025-26ರಲ್ಲಿ 26,56,000ರೂಗಳಿಗೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಕೂಗಿರುತ್ತಾರೆ. ಈ ಎರಡು ವರ್ಷಗಳ ಮುಕ್ತಿ ಬಾವುಟದ ಒಟ್ಟು ಹಣ 44,50,000 ರೂಗಳಾಗಿದ್ದು,  ಇದುವರೆಗೂ ಸನ್ಮಾನ್ಯ ಡಿ.ಸುಧಾಕರ್ ಅವರು ಹಣವನ್ನು ಸಂದಾಯ ಮಾಡಿಲ್ಲ ಎಂದು ಮುಜರಾಯಿ ಮತ್ತು ಕಂದಾಯ ಇಲಾಖೆಯಿಂದ ಮಾಹಿತಿ ಬಂದಿರುತ್ತದೆ.

ಇದರಿಂದ ಸಾರ್ವಜನಿಕರು ಸ್ವಾಮಿಯ ಭಕ್ತಾದಿಗಳು ಮತ್ತು ಇಲಾಖೆಯವರು ಬೇಸರಗೊಂಡಿರುತ್ತಾರೆ ಇದರಿಂದ ಆಡಳಿತ ಇರುವ ಕಾಂಗ್ರೆಸ್ ಪಕ್ಷಕ್ಕೂ ಬೇಸರವಾಗಿರುತ್ತದೆ. ಅಲ್ಲದೆ, ಡಿ.ಸುಧಾಕರ್ ಅವರು ಈ ವರ್ಷದ ಮುಕ್ತಿ ಬಾವುಟದ ಹಣವನ್ನು ಕಟ್ಟದಿದ್ದಲ್ಲಿ ಈ ವರ್ಷದ ಹರಾಜ್ ನಲ್ಲಿ  ಭಾಗವಹಿಸಲು ಬಿಡುವುದಿಲ್ಲ ಎಂದು ಭಕ್ತಾದಿಗಳು ಮತ್ತು ವಿರೋಧ ಪಕ್ಷದ ನಾಯಕರುಗಳು ಇಲಾಖೆಯ ಮುಖ್ಯಸ್ಥರಿಗೆ ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ತಿಳಿಸಿರುವುದಾಗಿ ಮಾಹಿತಿ ಬಂದಿರುತ್ತದೆ.

ಅಲ್ಲದೆ, ಹರಾಜಿನ  ಹಣವನ್ನು ಕಟ್ಟುವುದು ಸಹ ಜಿಲ್ಲಾ ಮಂತ್ರಿಗಳ ಕರ್ತವ್ಯವಾಗಿದ್ದು, ಸೂಕ್ತ ಸಮಯದಲ್ಲಿ ಹಣವನ್ನು ಸಂದಾಯ ಮಾಡುವುದು ತುಂಬಾ ಆರೋಗ್ಯಕರವಾದಂತಹ ಸಂಗತಿಯಾಗಿದ್ದು, ಇದರಿಂದ ಕಾಂಗ್ರೆಸ್ ಪಕ್ಷಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ನನ್ನ ಭಾವನೆ ಆಗಿರುತ್ತದೆ.

ಪಕ್ಷದ ದೃಷ್ಟಿಯಿಂದ ಮತ್ತು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವುದು ಬೇಡ. ಆದ್ದರಿಂದ ಸನ್ಮಾನ್ಯ ಜಿಲ್ಲಾ ಮಂತ್ರಿಗಳು 2026 ಫೆಬ್ರವರಿ 3ರ ಒಳಗೆ ಬಾಕಿ ಇರುವ ಎರಡು ವರ್ಷಗಳ ರಾಜನ ಮೂಲಕ ಕೂಗಿರುವ ಎರಡು ವರ್ಷಗಳ ಪೂರ್ಣ ಹಣವನ್ನು ಕಟ್ಟಿ ಈ ವರ್ಷದ ಹರಾಜಿನಲ್ಲಿ ಭಾಗವಹಿಸಿ ಮುಕ್ತಿ ಬಾವುಟವನ್ನು ಪಡೆಯಬೇಕೆಂದು ಸಮಸ್ತ ನಾಗರಿಕ ಬಂಧುಗಳು ಹಾಗೂ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಭಕ್ತಾದಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಳಿಕೊಳ್ಳುತ್ತಿದ್ದಾರೆ ಮತ್ತು ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಬೇಕಾಗಿ ಬಿಜೆಪಿ ಮುಖಂಡ ಕೇಶವಮೂರ್ತಿ ಅವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *