March 6, 2026
00004

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ವತಿಯಿಂದ

ಫೆಬ್ರವರಿ7ರಂದು ನಡೆಯುವ 7ನೇ ತಾಲ್ಲೂಕು ಕನ್ನಡ 

ಸಾಹಿತ್ಯಸಮ್ಮೇಳನಕ್ಕೆಸರ್ವಾಧ್ಯಕ್ಷರಾಗಿ ಸಾಹಿತಿ,ಹಿರಿಯ

ಪತ್ರಕರ್ತರಾದ ಎಂ.ಜಿ.ರಂಗಸ್ವಾಮಿ ಆಯ್ಕೆಯಾಗಿದ್ದಾರೆ.

ಹಿರಿಯೂರು:

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆಬ್ರವರಿ 7ರಂದು ನಡೆಯುವ  7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ  ಸಾಹಿತಿ, ಹಿರಿಯ ಪತ್ರಕರ್ತರಾದ ಎಂ.ಜಿ.ರಂಗಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ತಾಲ್ಲೂಕು ಕನ್ನಡ ಸಾಹಿತ್ಯ  ಪರಿಷತ್ತಿನ ಅಧ್ಯಕ್ಷರಾದ  ಸಿ.ರಾಮಚಂದ್ರಪ್ಪನವರ  ಅಧ್ಯಕ್ಷತೆಯಲ್ಲಿ  ನಗರದ ವೀನಸ್  ಹಾಲಿನಲ್ಲಿ ಗುರುವಾರ ನಡೆದ  ಕ.ಸಾ.ಪ. ಸಭೆಯಲ್ಲಿ  ಈ  ಮಹತ್ವಪೂರ್ಣ    ನಿರ್ಧಾರ ಕೈಗೊಂಡು ಸಮ್ಮೆಳನದ  ಅಧ್ಯಕ್ಷರ ಹೆಸರನ್ನು ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ   ಜಿ.ಪ್ರೇಮ್ ಕುಮಾರ್, ಮಾಜಿ ಅಧ್ಯಕ್ಷ ಹರ್ತೊಕೋಟೆ ಮಹಾಸ್ವಾಮಿ, ಸಕ್ಕರ  ರಂಗಸ್ವಾಮಿ,  ಮಹಮ್ಮದ್ ಫಕ್ರುದ್ಧೀನ್, ಗೌರವ ಕಾರ್ಯದರ್ಶಿಗಳಾದ  ಹೆಚ್. ಕೃಷ್ಣಮೂರ್ತಿ, ಜೆ. ನಿಜಲಿಂಗಪ್ಪ, ಕಸಬಾ ಹೋಬಳಿ ಅಧ್ಯಕ್ಷ ಹಚ್ಚುವ್ವನಹಳ್ಳಿ ಪ್ರಸನ್ನ, ಧರ್ಮಪುರ ಹೋಬಳಿ ಅಧ್ಯಕ್ಷ ಅಶೋಕ್, ಬಸವರಾಜು, ರೈತ ಮುಖಂಡರಾದ ಹೊರಕೇರಪ್ಪ,  ಪ್ರಹ್ಲಾದ್ , ಚಂದ್ರಶೇಖರಯ್ಯ, ಶಫೀವುಲ್ಲಾ,  ವೇದಾಪುಷ್ಪ, ಅಂಬಿಕಾ,  ರಂಗಧಾಮಯ್ಯ, ಗಡಾರಿಕೃಷ್ಣಪ್ಪ,  ಮಾರುತೇಶ್, ಈರಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಜಿ.ರಂಗಸ್ವಾಮಿ ಅವರು ಹಿರಿಯೂರು ತಾಲ್ಲೂಕಿನ  ಮಲ್ಲಪ್ಪನಹಳ್ಳಿ ಗ್ರಾಮದವರು  1962ರ ಮಾರ್ಚ್ 25 ರಂದು  ಜನಿಸಿದ ಶ್ರೀಯುತರು ಆರ್.ಗುಡುದಯ್ಯ ಮತ್ತು ಎಂ.ರಂಗಮ್ಮನವರ ಸುಪುತ್ರರು.ಸ್ವಗ್ರಾಮಹಾಗೂ ಚಿತ್ರದುರ್ಗದಲ್ಲಿ  ಪ್ರಾಥಮಿಕ  ಶಿಕ್ಷಣ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಮುಗಿಸಿತುಮಕೂರಿನ ಸಿದ್ಧಗಂಗಾ ಮಠ, ಮೈಸೂರು ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದು ಮಾನಸ ಗಂಗೋತ್ರಿಯಲ್ಲಿ ಡಿಪ್ಲೊಮಾ-ಇನ್-ಇಂಗ್ಲೀಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.

ಸುಮಾರು 35 ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ  ಶ್ರೀ ಪಂಚಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ  ಆಂಗ್ಲ ಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಮಾರ್ಚ್ 31, ಸಾಹಿತಿ ಎಂ.ಜಿ.ರಂಗಸ್ವಾಮಿಯವರು ರಚಿಸಿದ ಚಿತ್ರದುರ್ಗ ಜಿಲ್ಲೆಯಲ್ಲಿ ಬುಕನಾನ್ ಪುಸ್ತಕ.

ಲೇಖನಗಳ ಸಂಗ್ರಹ ಕೃತಿಯನ್ನು 2014ರಲ್ಲಿ ಸಿ.ವಿ.ಜಿ ಇಂಡಿಯಾ ಪ್ರಕಟಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬುಕನಾನ್, ಮಾರಿಕಣಿವೆ ವಾಣಿವಿಲಾಸ ಸಾಗರ ನಿರ್ಮಾಣದ ಕತೆ, ತುಮಕೂರು ಜಿಲ್ಲೆಯಲ್ಲಿ  ಬುಕನಾನ್ ಎಂಬುವು ಇವರ ಅನುದಾನಿತಕೃತಿಗಳಾಗಿವೆ.

ನೆಲದ ಸಂಕಥನ, ದುರುಗ ಸೀಮೆ ಸಾಧಕರು ಕೃತಿಗಳು ಪ್ರಕಟವಾಗಿವೆ. ಡಾಬ್ಸ್ ಆಡಳಿತ ನೋಟುಗಳು ಇವರ ನಾಲ್ಕನೇಯ ಅನುದಾನಿತ  ಕೃತಿಯಾಗಿದ್ದು ಬೆಂಗಳೂರು ಸೀಮೆಯಲ್ಲಿ  ಬುಕನಾನ್ ಎಂಬ ಕೃತಿ ಈ ತಿಂಗಳ ಅಂತ್ಯದಲ್ಲಿ  ಬಿಡುಗಡೆ ಆಗಲಿದೆ.

ಚಂದನ ದೂರದರ್ಶನ- ಶುಭೋದಯ ಕರ್ನಾಟಕದಲ್ಲಿ ಇವರ ನೇರ ಸಂದರ್ಶನ ಪ್ರಸಾರವಾಗಿದೆ. ಜೂನ್ 2024ರಲ್ಲಿ ಚಿತ್ರದುರ್ಗ ಆಕಾಶವಾಣಿ ಕೇಂದ್ರದಿಂದ  ಸರ್ವೇಕ್ಷಣಾಧಿಕಾರಿ ಹಾಗೂ ಫಿಜಿಷಿಯನ್ ಡಾ.ಫ್ರಾನ್ಸಿಸ್  ಬುಕಾನನ್, ಮಾರಿಕಣಿವೆ ಜಲಾಶಯದ  ನೀಲನಕ್ಷೆ  ರಚಿಸಿದ  ಎಂಜಿನಿಯರ್ ಹೆಚ್.ಡಿ.ರೈಸ್ ಮತ್ತು ಚಿತ್ರದುರ್ಗ ವಿಭಾಗದ ಪ್ರಥಮ ಸೂಪರಿಂಟೆಂಡೆಂಟ್(ಜಿಲ್ಲಾಧಿಕಾರಿ) ರಿಚರ್ಡ್ ಸ್ಟೀವರ್ಟ್ ಡಾಬರ್ಸ್(ಆರ್.ಎಸ್.ಡಾಬ್ಸ್) ರ ಸಾಧನೆ ಕುರಿತು ಸರಣಿ ರೇಡಿಯೋ ಕಾರ್ಯಕ್ರಮದಲ್ಲಿ  ವಿಷಯ ಮಂಡಿಸಿದ್ದಾರೆ.

ಇವರ ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ ಕೃತಿಯ ಆಯ್ದ ಅಧ್ಯಾಯಗಳನ್ನು ದಾವಣಗೆರೆ ವಿಶ್ವವಿದ್ಯಾಲಯ ಬಿ.ಕಾಂ ಮತ್ತು ಬಿ.ಬಿ.ಎ. ಪದವಿ ತರಗತಿಯ 3ನೇ ಸೆಮಿಸ್ಟರ್ ನ ಕನ್ನಡ ಪಠ್ಯ ಪುಸ್ತಕದಲ್ಲಿ 2025ರಲ್ಲಿ ಬಳಸಿಕೊಂಡಿದೆ.

2025ರಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಹತ್ವದ ಯೋಜನೆಯಾದ ದಿ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್ಸ್’ಸಂಪುಟಗಳ (ಇಂಗ್ಲಿಷ್ ನಿಂದ ಕನ್ನಡ) ಅನುವಾದ ಕಾರ್ಯದಲ್ಲಿ ಇದೀಗ ನಿರತರಾಗಿದ್ದಾರೆ.                   ಶ್ರೀಯುತರಿಗೆ ಚಿತ್ರದುರ್ಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

About The Author

Leave a Reply

Your email address will not be published. Required fields are marked *