
ಹಿರಿಯೂರು:
ನಗರದ ನೆಹರು ಕ್ರೀಡಾಂಗಣದಲ್ಲಿ ನಾಳೆ ಭರದಿಂದ ಸಾಗುತ್ತಿದೆ ಕರ್ನಾಟಕ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಆಹ್ವಾನಿತ ಕಬ್ಬಡಿ ಪಂದ್ಯಾವಳಿ ಜನವರಿ 30 ರಿಂದ ಫೆಬ್ರವರಿ 1ರವರೆಗೆ ನಡೆಯಲಿರುವ ಕಬ್ಬಡಿಪಂದ್ಯಾವಳಿಯನ್ನು ವೀಕ್ಷಿಸಲು ಸುಮಾರು ಎರಡುವರೆ ಸಾವಿರ ಜನರಿಗೆ ಗ್ಯಾಲರಿಯ ವ್ಯವಸ್ಥೆ ಮಾಡಲಾಗಿದೆ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಹೆಚ್.ಬಿ.ಯೋಗಾನಂದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಪಂದ್ಯಾವಳಿಗೆ ನಮ್ಮ ತಾಲ್ಲೂಕಿನ ಹಾಗೂ ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರ ಸಾರಥ್ಯದಲ್ಲಿ ನಡೆಯಲಿರುವ, ಕಬಡ್ಡಿ ಪಂದ್ಯಾವಳಿ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ 40ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂಬುದಾಗಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಎಂ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಈ ಪಂದ್ಯಾವಳಿಗೆ ಎಲ್ಲಾ ಜಿಲ್ಲೆಗಳ ಸುಮಾರು 20 ತಂಡಗಳು ಭಾಗವಹಿಸಲಿದ್ದು, ಲೀಗ್ ಕಮ್ ನಾಕ್ ಔಟ್ ಮಾದರಿಯಲ್ಲಿ ಮೂರು ದಿನಗಳ ಕಾಲ ಕಬಡ್ಡಿ ಪಂದ್ಯಾವಳಿ ನಡೆಯಲಿದೆ ಸಮಸ್ತ ನಾಗರಿಕರು ವರ್ತಕರು ಕ್ರೀಡಾಭಿಮಾನಿಗಳು ಕ್ರೀಡಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಒಂದು ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿ ಮಾಡಿಕೊಡಬೇಕು ಎಂಬುದಾಗಿ ಮನವಿ ಮಾಡಿದ್ದಾರೆ.
ಈ ಗ್ಯಾಲರಿ ವ್ಯವಸ್ಥೆಯ ವೀಕ್ಷಣೆಗಾಗಿ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಹೆಚ್.ಬಿ.ಯೋಗಾನಂದ, ಕಾರ್ಯದರ್ಶಿ ಟಿ.ಬಾಲಾಜಿ, ಸಂಘಟನಾ ಕಾರ್ಯದರ್ಶಿ ರವಿ, ಖಜಾಂಚಿ ಅಣ್ಣೇಶ್ ಕುಮಾರ್, ಸಂಚಾಲಕರುಗಳಾದ ಎಂ.ಪಿ.ತಿಪ್ಪೇಸ್ವಾಮಿ, ಮೊಹಮ್ಮದ್ ಭಾಷಾ, ಸೇರಿದಂತೆ ಅನೇಕರು ಬಂದು ಈ ಗ್ಯಾಲರಿಯ ವ್ಯವಸ್ಥೆಯನ್ನು ವೀಕ್ಷಣೆ ಮಾಡಿದರು .

ಕರ್ನಾಟಕ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ದಾವಣಗೆರೆ ದುರ್ಗಾಂಬಿಕ, ದಾವಣಗೆರೆ ಡಿವೈಎಸ್, ತುಮಕೂರು ಜಿಲ್ಲಾ ತಂಡ ಆಳ್ವಾಸ್ ಮೂಡಬಿದ್ರೆ, ಭದ್ರಾವತಿ ಕಬ್ಬಡಿ ತಂಡ, ಚಿತ್ರದುರ್ಗ ಜಿಲ್ಲಾ ಕಬ್ಬಡಿ ತಂಡ ರಾಯಭಾರಿ ಕಬ್ಬಡಿತಂಡ ನ್ಯೂ ಡೈಮಂಡ್ ಸ್ಪೋರ್ಟ್ಸ್ ಕ್ಲಬ್ ಶಿವಮೊಗ್ಗ, ಜಿಲ್ಲಾ ಕಬ್ಬಡಿ ತಂಡ ಬಳ್ಳಾರಿ, ಜಿಲ್ಲಾ ಕಬಡ್ಡಿ ತಂಡ ಗದಗ್, ಜಿಲ್ಲಾ ಕಬ್ಬಡಿ ತಂಡ ಧಾರವಾಡ, ಜಿಲ್ಲಾ ಕಬ್ಬಡಿ ತಂಡ ಬೆಳಗಾವಿ, ಜಿಲ್ಲಾ ಕಬ್ಬಡಿ ತಂಡ ಬೆಂಗಳೂರು, ಜಿಲ್ಲಾ ಕಬಡ್ಡಿ ತಂಡ ಹಾಗೂ ಹೆಚ್.ಎಂ.ಟಿ.ಕಬಡ್ಡಿ ತಂಡ ಉತ್ತರ ಕರ್ನಾಟಕ ಜಿಲ್ಲಾ ಕಬ್ಬಡಿ ತಂಡ ತುಮಕೂರು, ಡಿ.ವೈ.ಎಸ್. ಜಿಲ್ಲಾ ಕಬ್ಬಡಿ ತಂಡ ಎಲ್ಲಾ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂಬುದಾಗಿ ಅವರು ತಿಳಿಸಿದ್ದಾರೆ.
