

ಹಿರಿಯೂರು :
ನಗರದ ಸುಪ್ರಸಿದ್ಧ ದಕ್ಷಿಣಕಾಶಿ ಶ್ರೀತೇರುಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಉಪವಿಭಾಗಾಧಿಕಾರಿಗಳಾದ ಮೆಹಬೂಬ್ ಜಿಲಾನಿ ಖುರೇಶಿ ಮತ್ತು ತಹಶೀಲ್ದಾರ್ ಎಂ.ಸಿದ್ದೇಶ್ ಇವರುಗಳ ನೇತೃತ್ವದಲ್ಲಿ ದಸರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಅಕ್ಟೋಬರ್ 1ರಂದು ಬುಧವಾರ ಆಯುಧಪೂಜೆ, ಅಕ್ಟೋಬರ್ 2ರ ಗುರುವಾರ ವಿಜಯದಶಮಿ, ಬನ್ನಿ ಮುಡಿಯುವ ಕಾರ್ಯಕ್ರಮ ಮತ್ತು ಅಕ್ಟೋಬರ್ 3ರ ಶುಕ್ರವಾರ ಶ್ರೀಮೈಲಾರ ಲಿಂಗೇಶ್ವರಸ್ವಾಮಿ ದೇವರ ಸರಪಳಿ ಪವಾಡ ಉತ್ಸವ ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಲಾಯಿತು.
ಬನ್ನಿಮಂಟಪದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು. ಬರುವ ಭಕ್ತಾದಿಗಳಿಗೆ ದಾರಿಯಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು ಮತ್ತಿತರೆ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಮೈಲಾರಲಿಂಗೇಶ್ವರ ದೇವಾಲಯದ ಬಳಿ ಹೈಟೆನ್ಶನ್ ವಿದ್ಯುತ್ ತಂತಿ ಹರಿಯುತ್ತಿದ್ದು ಬದಲಾಯಿಸುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ವಿದ್ಯುತ್ ದೀಪಗಳನ್ನು ದಸರಾ ಉತ್ಸವ ಮುಗಿಯುವವರೆಗೂ ಮುಂದುವರಿಸಬೇಕೆಂದು ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣರವರಿಗೆ ಮನವಿ ಮಾಡಲಾಯಿತು.
ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿಮಮತಾ, ಬನ್ನಿಮಂಟಪಸಮಿತಿಅಧ್ಯಕ್ಷರಾದ ರಾಜಪ್ಪ, ಪ್ರಸಾದ್, ಮುಖಂಡರಾದ ಜಗದೀಶ್ ಬಂಡಾರಿ, ದಿವುಶಂಕರ್, ಎಂ.ರವೀಂದ್ರನಾಥ್, ನಾಗರಾಜ್, ಭೋಜಣ್ಣ, ಅರ್ಚಕರಾದ ಪ್ರಸನ್ನ ಕುಮಾರ್, ವಿಶ್ವನಾಥ್ ಆಚಾರ್ಯ, ಮಲ್ಲೇಶಚಾರ್ಯ, ನಾಗರಾಜಚಾರ್ಯ, ಚೇತನ್, ಶ್ರೀಕಂಠಚಾರ್ಯ, ಶ್ರೀನಿವಾಸ್, ಚಂದ್ರಶೇಖರ ಒಡೆಯರ್, ವೀರಪ್ಪ, ಪಿ.ಎಸ್ .ಐ ಶಶಿಕಲಾ, ರೆವೆನ್ಯೂ ಇಲಾಖೆಯ ಆರ್ ಐ, ಎಂ ಎನ್, ಸ್ವಾಮಿ, ಮಾಯವರ್ಮ, ಸ್ವಾಮಿ, ಚಿಕ್ಕಳ್ಳಿನಾಯಕ, ಶ್ವೇತಾ, ಮೋಹನಕುಮಾರಿ, ಎಂ.ಪಿ.ರಾಜು, ಕೃಷ್ಣ , ಶೇಖರ್, ಸಚಿನ್ ,ಕವಿಕುಮಾರ್, ಭರತರಾಜ್ ಹಾಗೂ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.